

ನವದೆಹಲಿ: ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಇದಾಗಲೇ ಭಾರತ 118 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಅದರಲ್ಲಿ ಒಂದಾಗಿರುವ ಪಬ್ಜಿ ಇಂದಿನಿಂದ ಅಂದರೆ ಅಕ್ಟೋಬರ್ 30ರಿಂದ ಸಂಪೂರ್ಣ ಕಾರ್ಯ ನಿರ್ವಹಣೆ ಬಂದ್ ಮಾಡಿದೆ.
ಇದಾಗಲೇ 118 ಆ್ಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆಯಲಾಗಿದೆ. ಆದರೆ ಈ ಆ್ಯಪ್ಗಳ ಪೈಕಿ ಪಬ್ಜಿ ಸೇರಿದಂತೆ ಕೆಲವೊಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದರೆ, ಇಂದಿನಿಂದ ಆ್ಯಪ್ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಪಬ್ಜಿ ಆಡಳಿತ ಮಂಡಳಿ ತನ್ನ ಫೇದಗಗಬುಕ್ ಪೇಜ್ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.
ಅಂದಹಾಗೆ ಪಬ್ಜಿಗೂ ಫುಲ್ಫಾರ್ಮ್ ಇದೆ ಎನ್ನುವುದು ಗೊತ್ತೆ? ಇದರ ವಿಸ್ತ್ರತ ರೂಪ Players Unknown Battleground. ಈ ಆಟವನ್ನು ಆರಂಭಿಸಿದ್ದು ದಕ್ಷಿಣ ಕೊರಿಯಾ. 2017ರ ಡಿಸೆಂಬರ್ 20ರಂದು ಇದನ್ನು ಕೊರಿಯಾದ ಪಬ್ಜಿ ಕಾರ್ಪೋರೇಷನ್ ಆರಂಭಿಸಿತ್ತು.
ನಂತರ ಇದಕ್ಕೆ ಇನ್ನಷ್ಟು ರೂಪ ತುಂಬಿ, ಮಕ್ಕಳೂ ಇದರಲ್ಲಿ ಅಡಿಕ್ಟ್ ಆಗುವಂತೆ ಹಾಗೂ ಅತ್ಯಂತ ಭಯಾನಕ ಎನ್ನುವಂಥ ಟಾಸ್ಕ್ ಕೊಟ್ಟು ಮಕ್ಕಳ ಮನಸ್ಸನ್ನೇ ಪರಿವರ್ತನೆ ಮಾಡಿ ಅವರ ಜೀವವನ್ನೂ ತೆಗೆಯುವ ಮಟ್ಟಿನ ಸಾಫ್ಟ್ವೇರ್ ಅಭಿವೃದ್ಧಿ ಮಾಡಿದ್ದು ಚೀನಾ ಮೂಲಕ ಟೆನ್ಸೆಂಟ್ ಎಂಬ ಕಂಪೆನಿ. ಈ ಆಟವಾಡಿ ಇದಾಗಲೇ ಹಲವಾರು ಮಕ್ಕಳು, ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಇದನ್ನು ನಿಷೇಧ ಮಾಡಲಾಗಿದೆ. ಆದರೂ ಕೆಲವೊಂದು ರೂಪದಲ್ಲಿ ಇದು ಕಾರ್ಯ ನಿರ್ವಹಿಸುತ್ತಲೇ ಇತ್ತು. ಆದ್ದರಿಂದ ಇಂದಿನಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಟಾಪ್ ಮಾಡಲಾಗಿದೆ.
ಈ ಗೇಮ್ ಮಕ್ಕಳ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಇದು ಬ್ಯಾನ್ ಆಗಿರುವ ಕಾರಣಕ್ಕೆ ಕೆಲ ಮಕ್ಕಳು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವುದು ವರದಿಯಾಗಿದೆ.