

ಉತ್ತರ: ಯಾವುದೇ ವ್ಯವಹಾರ ಮೋಸದಿಂದ ಆಗಿದ್ದರೆ, ಮೋಸದ ವಿಷಯ ತಿಳಿದ ಮೂರು ವರ್ಷದ ಒಳಗೆ ದಾವೆ ಹಾಕಬೇಕು.
ನಿಮ್ಮ ಅಜ್ಜ ತಮ್ಮ ಜೀವಿತ ಕಾಲದಲ್ಲಿ ಪ್ರಶ್ನೆ ಮಾಡದೇ ಇದ್ದದ್ದನ್ನು, ಕ್ರಯ ಆದ ಅರವತ್ತು ವರ್ಷಗಳ ನಂತರ, ಮತ್ತು ನಿಮ್ಮ ಅಜ್ಜ ತೀರಿಕೊಂಡ ಇಪ್ಪತ್ತು ವರ್ಷಗಳ ನಂತರ , ಪ್ರಶ್ನೆ ಮಾಡಲು ಆಗುವುದಿಲ್ಲ. ಲಿಮಿಟೇಷನ್ ಕಾಲಮಿತಿ ಕಾಯ್ದೆ ನಿಮಗೆ ಅಡ್ಡ ಬರುತ್ತದೆ. ವೃಥಾ ಕೇಸು ಹಾಕಿ ಹಣ ನಷ್ಟ ಮಾಡಿಕೊಳ್ಳಬೇಡಿ.