ಯಮುನೆಗೆ ಬಂದ ಪ್ರಿಯಾಂಕಾ: ವಿಶ್ರಮ್​ ಘಾಟ್​​ನಲ್ಲಿ ಮೊಳಗಿತು ವೇದ ಮಂತ್ರ, ನೆರವೇರಿತು ವಿಶೇಷ ಪೂಜೆ

priyanka
Published on

ಲಖನೌ: ಉತ್ತರ ಪ್ರದೇಶದ ಚುನಾವಣೆ ಇನ್ನೇನು ಸಮೀಪವಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕ್ಷೇತ್ರವಾಗಿರುವ ಉತ್ತರ ಪ್ರದೇಶದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಈ ನಡುವೆಯೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಯಮುನಾ ಪೂಜೆ ನೆರವೇರಿಸಿದರು.

ಉತ್ತರ ಪ್ರದೇಶದ ಮೊದಲ ಹಂತದ ಮತದಾನಕ್ಕೆ ಪ್ರಚಾರ ಮುಗಿದಿದ್ದು, ಇದರ ಬೆನ್ನಲ್ಲೇ ಈ ಪೂಜೆ ಮಾಡಿದ್ದಾರೆ. ಮಥುರಾದ ವಿಶ್ರಮ್​ ಘಾಟ್​​ನಲ್ಲಿ ಯಮುನಾ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅಲ್ಲಿ ಹಲವಾರು ಅರ್ಚಕರು ಉಪಸ್ಥಿತರಿದ್ದರು. ಅವರೆಲ್ಲರೂ ದೊಡ್ಡದಾಗಿ ವೇದ ಮಂತ್ರ ಪಠಿಸಿದರು,

ಪ್ರಿಯಾಂಕಾ ಮಂಗಳವಾರ ಮೀರತ್​, ಆಗ್ರಾ ಮತ್ತು ಮಥುರಾ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net