

ಚಿಕ್ಕಮಗಳೂರು: ನಾಳೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರ ಮಕ್ಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ. ಆದ್ರೆ ಅವರಿಗೆ ಇದಿನ್ನೂ ಗೊತ್ತಿಲ್ಲ, ಅದೇ ಇನ್ನೊಂದೆಡೆ ಓಟಿಗಾಗಿ ಬಿಜೆಪಿಯರವ್ರು ಸೆಕ್ಯೂಲರ್ ಆಗ ಹೊರಟಿದ್ದಾರೆ ಅನ್ಸತ್ತೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದ್ರು ಒಂದು ಓಟ್ ಬೀಳಲ್ಲ. ಓಟಿಗಾಗಿ ಬಿಜೆಪಿಯರವ್ರು ಸೆಕ್ಯೂಲರ್ ಆಗ ಹೊರಟಿದ್ದಾರೆ ಅನ್ಸತ್ತೆ. ದೇವಸ್ಥಾನ ಕೆಡವಿದ್ದು, ಗಣೇಶೋತ್ಸವ, ದತ್ತಪೀಠ ವಿಚಾರದಲ್ಲಿ ಹಾಗೇ ಅನ್ನಿಸ್ತಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ. ಹಿಂದೂಗಳು ನಿಮ್ಮನ್ನ ಗೆಲ್ಲಿಸಿದ್ದೇವೆ, ಹಿಂದೂಗಳಿಗೆ ನ್ಯಾಯ ಒದಗಿಸಿ ಎಂದು ಅವರು ಹೇಳಿದರು.
ಕಾಂಗ್ರೆಸ್ ವಿರುದ್ಧವೂ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೇ ಮುಸ್ಲಿಮರಿಗಾಗಿ. ನಾಳೆ ಅವ್ರ ಮಕ್ಳು, ಮೊಮ್ಮಕ್ಳು ಮುಸ್ಲಿಮರಾಗ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಹರಿಹಾಯ್ದರು.