ಮಗಳ ಸಾವಿಗೆ ಅಳಿಯನ ಖಾಸಗಿ ಅಂಗ ಕಾರಣ ಎಂದು ತಂದೆಯ ದೂರು: ಗಾತ್ರ ಪರೀಕ್ಷಿಸಿದ ಪೊಲೀಸರು!

test
ಪರೀಕ್ಷೆಗೊಳಗಾದ ಗಂಡ (ನಡುವೆ) ಜತೆ ತನಿಖಾಧಿಕಾರಿ ಹಾಗೂ ದೂರು ಕೊಟ್ಟ ಮಾವ
Published on

ಜಾವಾ: ರಾತ್ರಿಯವರೆಗೆ ಚೆನ್ನಾಗಿದ್ದ ಮಗಳು ಬೆಳಗ್ಗೆ ಇದ್ದಕ್ಕಿದ್ದಂತೆಯೇ ಮೃತಪಟ್ಟಿದ್ದು, ಇದಕ್ಕೆ ತನ್ನ ಅಳಿಯನ ಜನನಾಂಗವೇ ಕಾರಣ ಎಂದು ಯುವತಿಯ ತಂದೆ ಪೊಲೀಸರಲ್ಲಿ ದೂರಿರುವ ವಿಚಿತ್ರ ಘಟನೆ ನಡೆದಿದೆ.

ಕಳೆದ ವರ್ಷ ನಡೆದಿರುವ ಈ ಘಟನೆ ಇದೀಗ ವೈರಲ್‌ ಆಗಿದ್ದು, ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇಂಥದ್ದೊಂದು ಘಟನೆ ವರದಿಯಾಗಿರುವುದು ಇಂಡೋನೇಷ್ಯಾದ ಪೂರ್ವ ಜಾವಾದ ಮರೋನ್‌ ಕಿಡೋಲ್‌ ಎಂಬ ಪ್ರದೇಶದಿಂದ. ದೂರಿನ ಆಧಾರದ ಮೇಲೆ ಪೊಲೀಸರು ಗಂಡನ ಬಟ್ಟೆ ಬಿಚ್ಚಿ ಖಾಸಗಿ ಅಂಗದ ಗಾತ್ರವನ್ನು ಪರೀಕ್ಷೆ ಮಾಡಿದ್ದಾರೆ!

ಇಂಥ ಒಂದು ವಿಚಿತ್ರ ಪರೀಕ್ಷೆ ಎದುರಿಸಿರುವ ಅಳಿಯನ ಹೆಸರು ಬರ್ಸಾಹ್‌. ಈತನ ವಿರುದ್ಧ ದೂರು ದಾಖಲು ಮಾಡಿದ್ದ ಮಾವನ ಹೆಸರು 55 ವರ್ಷದ ನೇಡಿ ಸಿಟೊ. ನೇಡಿಯ ಮಗಳು ಜುಮಾಂಟ್ರಿಯ ಜತೆ ಬರ್ಸಾಹ್‌ನ ವಿವಾಹವಾಗಿತ್ತು. ಇವರು ಚೆನ್ನಾಗಿಯೇ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಅದೊಂದು ದಿನ ರಾತ್ರಿ ಬೆಳಗಾಗುವುದರೊಳಗೆ ಜಮಾಂಟ್ರಿ ಮೃತಪಟ್ಟಳು.

ಅಳಿಯ ಕೂಡ ಒಳ್ಳೆಯವನೇ ಆಗಿದ್ದರಿಂದ ಮೊದಲಿಗೆ ಅಪ್ಪ ಕೂಡ ಯಾವುದೇ ಸಂದೇಹ ವ್ಯಕ್ತಪಡಿಸದೇ ಅದು ಸಹಜಸಾವು ಎಂದುಕೊಂಡು ಮಗಳ ಅಂತ್ಯಕ್ರಿಯೆಯನ್ನೂ ನೆರವೇರಿಸಿದ. ಆದರೆ ಈತನಿಗೆ ಸಂದೇಹ ಶುರುವಾದದ್ದು ಊರಿನವರು ಮಾತನಾಡಿಕೊಂಡಾಗ. ಹೀಗೆ ಏಕಾಏಕಿ ಆಕೆ ಮೃತಪಡಲು ಕಾರಣ, ಬಹುಶಃ ಆಕೆಯ ಗಂಡ ರಾತ್ರಿಪೂರ್ತಿ ಸೆಕ್ಸ್‌ ಮಾಡಿರಬಹುದು. ಆತನ ಜನನಾಂಗ ಬಹಳ ದೊಡ್ಡದು ಇದ್ದಿರಬಹುದು, ಆದ್ದರಿಂದ ಯುವತಿ ಮೃತಪಟ್ಟಿದ್ದಾಳೆ. ಇಲ್ಲದಿದ್ದರೆ ಆರೋಗ್ಯವಂತಳಾಗಿರುವ ಆಕೆ ಸಾಯಲು ಕಾರಣವೇ ಇಲ್ಲ ಎಂದರು. ಇದು ಈ ಅಪ್ಪನ ಕಿವಿಯ ಮೇಲೆ ಬೀಳುತ್ತಲೇ ಅಳಿಯನ ಬಗ್ಗೆ ಸಂದೇಹ ಶುರುವಾಗಿ ನೇರವಾಗಿ ತನ್ನ ಮಗಳ ಸಾವಿಗೆ ಅಳಿಯನ ಜನನಾಂಗ ಕಾರಣ ಎಂದು ದೂರು ದಾಖಲು ಮಾಡಿದರು.

ಅನಿವಾರ್ಯವಾಗಿ ಪೊಲೀಸರು ಪತಿಯನ್ನು ಕರೆದು ಜನನಾಂಗ ಪರೀಕ್ಷೆ ಮಾಡಿದ್ದಾರೆ. ಆದರೆ ಅದು ಅಸಮಾನ್ಯ ಗಾತ್ರವೇನೂ ಇರಲಿಲ್ಲ. ಸಾಮಾನ್ಯವಾಗಿಯೇ ಇದ್ದು, ಇದರಿಂದ ಪತ್ನಿ ಮೃತಪಟ್ಟಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ. ವೈದ್ಯಕೀಯ ಪರೀಕ್ಷೆಯೂ ನಡೆದು ಅಂತೂ ಗಂಡ ಬಿಡುಗಡೆಗೊಂಡ. ನಂತರ ಸಾವಿನ ತನಿಖೆ ಮಾಡಿದಾಗ ಜಮಾಂಟ್ರಿಗೆ ಚಿಕ್ಕ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆ ಇತ್ತು. ಎಪಿಲಪ್ಸಿ ಸಮಸ್ಯೆಯಿಂದ ಅವಳು ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net