ನಮಾಜ್​ ನಂತರ ದ್ವೇಷ ಭಾಷಣ ಮಾಡಬೇಡಿ ಎಂದಿದ್ದಕ್ಕೆ ಇನ್ಸ್​ಪೆಕ್ಟರ್​ ರಾತ್ರೋರಾತ್ರಿ ಎತ್ತಂಗಡಿ!

namaz
Published on

ಕಣ್ಣೂರ (ಕೇರಳ): ಹಿಂದೂ ದೇವರಿಗೆ ಅವಹೇಳನ ಮಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಅವರ ಕುರಿತು ಮಾತನಾಡಿದ ಕಾರಣಕ್ಕೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ವಿರುದ್ಧ ದೇಶ-ವಿದೇಶಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ, ನಮಾಜ್​ ನಂತರ ದ್ವೇಷ ಭಾಷಣ ಮಾಡದಂತೆ ಹೇಳಿದ ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರನ್ನು ರಾತ್ರೋರಾತ್ರಿ ವರ್ಗ ಮಾಡಲಾಗಿದೆ!

ಈ ಘಟನೆ ನಡೆದಿರುವುದು ಕೇರಳದಲ್ಲಿ. ಶುಕ್ರವಾರದ ನಮಾಜ್ ನಂತರ ಮಸೀದಿಯಲ್ಲಿ ದ್ವೇಷ ಭಾಷಣ ಮಾಡದಂತೆ ಮಸೀದಿ ಕಮಿಟಿಗೆ ನೋಟಿಸ್​ ನೀಡಿದ್ದ ಮಯ್ಯಿಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿದ್ದ ಬಿಜು ಪ್ರಕಾಶ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಕೋಮು ಸೌಹಾರ್ದ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್​ನಲ್ಲಿ ಇನ್ಸ್​ಪೆಕ್ಟರ್​ ಎಚ್ಚರಿಸಿದ್ದರು.

ಈ ನೋಟಿಸ್​ ವಿರುದ್ಧ ಮುಸ್ಲಿಂನ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಸಮ್ಸಾಥಾ ಜಮಾಯುತ್​-ಉಲ್ ಉಲೇಮಾ ಸಂಘಟನೆ, ಮುಸ್ಲಿಂ ಲೀಗ್ ಹಾಗೂ ಎಸ್​ಡಿಪಿಐ ಸೇರಿದಂತೆ ಕೆಲವು ಸಂಘಟನೆಗಳು ನೋಟಿಸ್​ ಅನ್ನು ಖಂಡಿಸಿದ್ದವು. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಲೀಗ್ ಆಗ್ರಹಿಸಿವೆ. ಸುನ್ನಿ ಮಹಲ್ ಫೆಡರೇಶನ್ ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದೆ. ಪೊಲೀಸ್ ಅಧಿಕಾರಿ ತಮಗೆ ಅವಮಾನ ಮಾಡಿರುವುದಾಗಿ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಅದೇ ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಅವರನ್ನು ವರ್ಗ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಸರ್ಕಾರ, "ಸ್ಟೇಷನ್ ಹೌಸ್ ಆಫೀಸರ್ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ನೋಟಿಸ್ ಕಳುಹಿಸಿದ್ದಾರೆ. ಹಾಗಾಗಿ ಅವರಿಗೆ ವರ್ಗ ಮಾಡಿದ್ದೇನೆ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net