

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 70 ವಸಂತಗಳನ್ನು ಪೂರೈಸಿದ್ದು, 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಇದಾಗಲೇ ಭಾರತ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಪ್ರಧಾನಿ ಮೋದಿಯವರು ವಿಶ್ವದ ಪ್ರಭಾವಶಾಲಿ ನಾಯಕ ಎಂದೂ ಹೆಸರು ಗಳಿಸಿದವರು. ಅವರ ಈ ಹುಟ್ಟುಹಬ್ಬಕ್ಕೆ ಇದಾಗಲೇ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಟ್ವಿಟ್ಟರ್, ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಮೋದಿಯವರು ಇದಾಗಲೇ ಈ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಹೇಳಿಕೊಂಡಿರುವ ಹಲವಾರು ಮಂದಿಗೆ ಪರಿಹಾರವನ್ನೂ ನೀಡಿದ್ದಾರೆ, ಜತೆಗೆ ಪ್ರಧಾನಿ ಕಾರ್ಯಾಲಯವು ಹಲವಾರು ಜನರಿಗೆ ಸ್ಪಂದಿಸಿರುವುದು ಕೂಡ ಇದೇ ಜಾಲತಾಣಗಳ ಮೂಲಕ.
ಪ್ರಧಾನಿ ಮೋದಿಯವರಿಗೆ ಬರ್ತ್ಡೇ ವಿಷ್ ಮಾಡಬೇಕು ಎಂದು ನಿಮಗೂ ಅನ್ನಿಸಿರಬಹುದು, ಆದರೆ ಅದು ಹೇಗೆ? ಅವರಿಗೆ ಶುಭಾಶಯ ಸಂದೇಶ ಕಳುಹಿಸುವುದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆ ಕಾಡುತ್ತಿದ್ದರೆ ಅದಕ್ಕೆ ಉತ್ತರ ನಮೋ ಆ್ಯಪ್.
ಸಾಮಾಜಿಕ ಜಾಲತಾಣಗಳ ಜತೆಯಲ್ಲಿ ನಮೋ ಆ್ಯಪ್ ಕೂಡ ಇದೀಗ ಜನಮನವನ್ನು ಗೆದ್ದಿದೆ. ಇದರ ಮೂಲಕವೇ ನೀವು ಶುಭಾಶಯ ಕಳುಹಿಸಬಹುದಾಗಿದೆ.
ಅದಕ್ಕಾಗಿ ನೀವು ನಮೋಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. http://nm4.in/dnldapp ಎಂದು ಟೈಪಿಸುವ ಮೂಲಕ ನಮೋಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಕೆಳಗಿನ ಬಿಜೆಪಿಯ ಟ್ವಿಟ್ರ್ನಲ್ಲಿ ಲಿಂಕ್ ಜತೆ ಸಂಪೂರ್ಣ ಮಾಹಿತಿ ಇದೆ ನೋಡಿ... -