

ವಾಷಿಂಗ್ಟನ್: ತನ್ನ ಎದೆಯನ್ನು ಪ್ರದರ್ಶಿಸುವ ದಿರಿಸು ಧರಿಸಿ ವಿಮಾನ ಏರಿದ ಯುವತಿಯೊಬ್ಬಳಿಗೆ ವಿಮಾನದ ಪೈಲಟ್ ತನ್ನ ಟೀ-ಷರ್ಟ್ ನೀಡಿರುವ ಘಟನೆ ನಡೆದಿದೆ.
ಸೌತ್ವೆಸ್ಟ್ ಏರ್ಲೈನ್ಸ್ಗೆ ಕೇಯ್ಲಾ ಯುಬ್ಯಾಂಕ್ಸ್ ಎಂಬಾಕೆ ಹತ್ತಿದ್ದಳು. ಆದರೆ ಆಕೆ ತೊಟ್ಟಿರುವ ಗೌನ್ನಲ್ಲಿ ಆಕೆಯ ಮುಕ್ಕಾಲು ದೇಹ ದರ್ಶನವಾಗುತ್ತಿತ್ತು. ಇದನ್ನು ಗಮನಿಸಿದ ಕ್ಯಾಪ್ಟನ್ ಇದು ತುಂಬಾ ಅಶ್ಲೀಲವಾಗಿದೆ ಎಂದು ಹೇಳಿದ್ದಾರೆ.
ಇದರಿಂದ ಸಿಡಿಮಿಡಿಗೊಂಡ ಯುವತಿ, ನನ್ನ ಬಟ್ಟೆಗೂ ವಿಮಾನ ಪ್ರಯಾಣಕ್ಕೂ ಏನು ಸಂಬಂಧ? ಇದು ನನ್ನ ಇಷ್ಟ. ನಾನು ಹೇಗೆ ಬೇಕಾದರೂ ಡ್ರೆಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. ಆದರೆ ಸಿಬ್ಬಂದಿ ಆಕೆಯನ್ನು ಇದೇ ಡ್ರೆಸ್ನಲ್ಲಿ ಮೇಲೆ ಏರಲು ಬಿಟ್ಟಿಲ್ಲ. ತನ್ನ ಬಳಿ ಬೇರೆ ಡ್ರೆಸ್ ಇಲ್ಲ ಎಂದು ಯುವತಿ ಹೇಳಿದ ಕಾರಣ, ಆಕೆಗೆ ಪೈಲಟ್ ಡ್ರೆಸ್ ನೀಡಿದ್ದಾರೆ.
ಇದರಿಂದ ತೀವ್ರ ಸಿಟ್ಟುಕೊಂಡಿರುವ ಕೇಯ್ಲಾ ಯುಬ್ಯಾಂಕ್ಸ್ ಕ್ಯಾಪ್ಟನ್, ಪೈಲಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನಗೆ ಪೈಲಟ್ ಷರ್ಟ್ ತೊಟ್ಟು ಹೋಗುವಂತೆ ಮಾಡಲಾಗಿದೆ. ಇದು ತೀರಾ ಅನ್ಯಾಯವಾಗಿದೆ ಎಂದು ಬರೆದುಕೊಂಡಿದ್ದಾಳೆ.
ಒಬ್ಬ ಮಹಿಳೆಯ ಮೇಲೆ ಈ ರೀತಿ ದೌರ್ಜನ್ಯ ಎಸಗಲು ಹೇಗೆ ಸಾಧ್ಯ? ನನ್ನಿಷ್ಟದ ಬಟ್ಟೆ ತೊಟ್ಟರೆ ಯಾರಿಗೆ ಏನು ಸಮಸ್ಯೆ? ಇದರಲ್ಲಿ ಅಶ್ಲೀಲ ಎನ್ನುವುದು ಏನಿದೆ ಎಂದೆಲ್ಲಾ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾಳೆ. ಈಕೆಯ ಪರವಾಗಿ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ.