

ಚೆನ್ನೈ: ಹಲವೆಡೆಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಇಂಥ ಸಮಯದಲ್ಲಿ ತಮಿಳುನಾಡು ಸರ್ಕಾರ ವಾಹನ ಸವಾರರಿಗೆ ಗುಡ್ನ್ಯೂಸ್ ಕೊಟ್ಟಿದ್ದು, ಪೆಟ್ರೋಲ್ ಬೆಲೆಯನ್ನು ಮೂರು ರೂಪಾಯಿಗೆ ಇಳಿಸಿದೆ.
ಹಣಕಾಸು ಸಚಿವ ಪಿ ತ್ಯಾಗರಾಜನ್ ಈ ವಿಷಯವನ್ನು ತಿಳಿಸಿದ್ದು, ಪೆಟ್ರೋಲ್ ಮೇಲಿನ ರಾಜ್ಯ ಸುಂಕವನ್ನು ಕಡಿತಗೊಳಿಸಿರುವುದಾಗಿ ಹೇಳಿದ್ದಾರೆ. ಹೀಗೆ ಮಾಡಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1,160 ಕೋಟಿ ರೂಪಾಯಿ ನಷ್ಟವಾಗಲಿದ, ಆದರೂ ವಾಹನ ಬಳಕೆದಾರರ ಹಿತಾಸಕ್ತಿಯಿಂದ ಹೀಗೆ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಡಿಎಂಕೆ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರ್ಗೆ 5 ರೂಪಾಯಿಗಳಷ್ಟು ಕಡಿತ ಮಾಡುವುದಾಗಿ ಘೋಷಿಸಿತ್ತು. ಅಷ್ಟು ಸಾಧ್ಯವಾಗಿಲ್ಲದ ಕಾರಣ ಮೂರು ರೂಪಾಯಿ ಇಳಿಸಿರುವುದಾಗಿ ಅವರು ಹೇಳಿದ್ದಾರೆ.
ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರು ಇದೇ ರೀತಿ ತಮಗೂ ಅನ್ವಯ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ತಮಿಳುನಾಡು ಸರ್ಕಾರಕ್ಕೆ ಇದು ಸಾಧ್ಯವಿರುವಾಗ ಬೇರೆ ರಾಜ್ಯಗಳಿಗೆ ಸಾಧ್ಯವಿಲ್ಲವೇಕೆ ಎನ್ನುವುದು ಅವರ ಪ್ರಶ್ನೆ.