ಮನೆ ಮನೆಗೆ ಆಹಾರ ವಿತರಿಸಿದ ಮುದ್ದು‌ ಪಾಂಡಾ: ಫೋಟೋ ನೋಡಿ ಖುಷಿಪಟ್ಟರು, ಪೂರ್ತಿ ಓದಿ ಪೆಚ್ಚಾದರು!

panda
Published on

ಕೌಲಾಲಂಪುರ (ಮಲೇಷಿಯಾ): ’ಮನೆಮನೆಗೆ ಆಹಾರಗಳನ್ನು ವಿತರಣೆ ಮಾಡಲು ಮುದ್ದಾದ ಪಾಂಡಾ ಮನೆಬಾಗಿಲಿನವರೆಗೆ ಬಂದಿದ್ದರಿಂದ ಮಲೇಷಿಯಾದ ಜನರು ಬಹಳ ಖುಷಿಯಾಗಿರುವ ಘಟನೆ ನಡೆದಿದೆ.

ಆನ್ ಲೈನ್ ಫುಡ್ ಡೆಲಿವರಿ ಕಂಪನಿಯಾದ ಫುಡ್ ಪಾಂಡಾದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪಾಂಡಾವನ್ನು ತನ್ನ ಜತೆಗೆ ಕರೆದುಕೊಂಡು ಹೋಗಿದ್ದ. ಅವನ ಜತೆ ಮನೆ ಮನೆಗೆ ತೆರಳಿದ್ದ ಈ ಪಾಂಡಾ, ಜನರಿಗೆ ಆಹಾರ ಪೊಟ್ಟಣಗಳನ್ನು ನೀಡಿತು. ಜನರು ಮನೆಯ ಬಾಗಿಲನ್ನು ತೆರೆದು ಹೊರಕ್ಕೆ ಬಂದಾಗ ಪಾಂಡಾ ಆಹಾರದ ಪೊಟ್ಟಣ ಹಿಡಿದು ನಿಂತಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಕೆಲವರಂತೂ ಕುಣಿದು ಕುಪ್ಪಳಿಸಿದರು.

--- ಹೀಗೆಂದು ಬರೆದುಕೊಂಡು ತನ್ನ ಜತೆ ಪಾಂಡಾದ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾನೆ ಮಲೇಷಿಯಾದ 22ರ ಯುವಕ ಉಜೇರ್‌.

ಹೆಚ್ಚಿನ ಸ್ಟಡಿ ಮಾಡುವ ಸಂಬಂಧ ಡೆಲಿವರಿ ಬಾಯ್‌ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಆದ್ದರಿಂದ ನನ್ನ ಕೊನೆಯ ದಿನವನ್ನು ಸ್ಮರಣೀಯ ಮಾಡಬೇಕು ಎನ್ನುವ ಉದ್ದೇಶದಿಂದ ಪಾಂಡಾವನ್ನು ಕರೆದುಕೊಂಡು ಹೋಗಿದ್ದೇನೆ ಎಂದು ಯುವಕ ಹೇಳಿದ್ದಾನೆ.

ಇಷ್ಟು ಓದಿದವರು ಬಹಳ ಖುಷಿಪಟ್ಟಿದ್ದಾರೆ. ಫೋಟೋ ನೋಡಿದವರು ವ್ಹಾ ವ್ಹಾ ಎಂದರು.

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಥವಾ ಸುದ್ದಿ ವೈರಲ್‌ ಆದಾಗ ಅದರ ಹೆಡ್ಡಿಂಗ್‌ ನೋಡಿಯೋ ಇಲ್ಲವೇ ಒಂದೆರಡು ವಾಕ್ಯ ಓದಿಯೋ ಅದನ್ನು ಶೇರ್‌ ಮಾಡುವವರೇ ಹೆಚ್ಚು. ಮುಂದೆ ಓದುವಷ್ಟು ತಾಳ್ಮೆ ಇಲ್ಲದ ಹಲವರು ಕಮೆಂಟ್‌ ಮಾಡುತ್ತಾರೆ. ಇಲ್ಲಿಯೂ ಹಾಗೆಯೇ ಆಗಿದೆ.

| ಫೋಟೋ ನೋಡಿಯೋ ಅಥವಾ ಒಂದೆರಡು ವಾಕ್ಯ ಓದಿಯೋ (ಅಂದರೆ ನಾನು ನನ್ನ ಕೊನೆಯ ದಿನ ಪಾಂಡಾ ಕೊಂಡಿಯ್ದಿದ್ದೆ ಎಂದು) ಓದಿ ಸಹಸ್ರಾರು ಮಂದಿ ಶೇರ್‌ ಮಾಡಿ ಕ್ಯೂಟ್‌ ಪಾಂಡಾ, ಸಕತ್‌ ಆಗಿದೆ, ಎಲ್ಲಿ ಸಿಕ್ತು ಈ ಪಾಂಡಾ, ನೀವೇ ಸಾಕಿದ್ದಾ ಎಂದೆಲ್ಲಾ ಕಮೆಂಟ್‌ ಮೂಲಕ ಪ್ರಶ್ನಿಸಿದ್ದಾನೆ.

ಆದರೆ ಅಸಲಿಗೆ ಈ ಯುವಕ ಯಾವ ಪಾಂಡಾವನ್ನು ಕೊಂಡೊಯ್ದಿಲ್ಲ. ಭಲೆ ಜಾಣನಾಗಿರುವ ಈತ ಕೊನೆಗೆ ಒಂದೆರಡು ವಾಕ್ಯದಲ್ಲಿ ತಾನು ಹಾಕಿರುವ ಈ ಫೋಟೋ ಅಸಲಿಯದ್ದಲ್ಲ ಎಂದು ಬರೆದುಕೊಂಡಿದ್ದಾನೆ.

ಪೋಟೋ ಎಡಿಟ್ ಮಾಡುವ ಕೌಶಲ್ಯತೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಹೀಗಾಗಿಯೇ ನನ್ನ ಬೈಕ್ ಹಿಂದೆ ಪಾಂಡಾ ಕುಳಿತಿರುವ ಹಾಗೆ ಪೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ. ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೆನೆ ನಾನು ನನ್ನು ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಗಿದೆ. ಹೀಗಾಗಿ ಕೆಲಸದ ಕೊನೆಯದಿನವನ್ನು ವಿಶೇಷವಾಗಿ ಕಳೆಯಬೇಕು ಎಂದು ಇಂತಹ ವಿಶೇಷ ಆಲೋಚನೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಅಸಲಿಯತ್ತು ತಿಳಿಯುವ ಮೊದಲೇ ಸಕತ್‌ ವೈರಲ್‌ ಆಗಿದೆ ಇದು.

ಸಂಪೂರ್ಣ ಓದಿದ ಮೇಲೂ ಕೆಲವರು ಮೆಚ್ಚುಗೆ ಸೂಸಿದ್ದಾರೆ ಎನ್ನಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net