ತಂದೆಯ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುವುದು ಹೇಗೆ?

nyayadevate
Published on
ಪ್ರಶ್ನೆ: ನಮ್ಮ ತಂದೆ ತೀರಿಕೊಂಡಿದ್ದಾರೆ. ನಮ್ಮ ತಂದೆ ತಾಯಿಗೆ ನಾನು ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು. ಈಗ ಆಸ್ತಿಗಳನ್ನು ನಮ್ಮ ತಾಯಿಗೆ ವರ್ಗಾವಣೆ ಮಾಡಲು ನಮ್ಮ ಅಕ್ಕ ತಂಗಿಯರ ಸಹಿ ಬೇಕೆ? ಎಷ್ಟು ದಿನಗಳ ಸಮಯ ಆಗುತ್ತದೆ? ಆಸ್ತಿ ಪಂಚಾಯ್ತಿಯ ವ್ಯಾಪಿಯಲ್ಲಿ ಬರುತ್ತದೆ.

ಉತ್ತರ; ನಿಮ್ಮ ತಂದೆ ತೀರಿಕೊಂಡ ನಂತರ ಅವರ ಆಸ್ತಿಯಲ್ಲಿ ನಿಮ್ಮ ತಾಯಿಗೆ , ಮತ್ತು ಮೂವರು ಮಕ್ಕಳಿಗೂ ತಲಾ ನಾಲ್ಕನೇ ಒಂದು ಭಾಗ ಇರುತ್ತದೆ. ಬೇಕಿದ್ದರೆ ನೀವು ಮೂವರು ಮಕ್ಕಳೂ ಒಪ್ಪಿಗೆ ಕೊಟ್ಟರೆ ಖಾತೆಯನ್ನು ಪಂಚಾಯ್ತಿಯವರು ನಿಮ್ಮ ತಾಯಿಯ ಹೆಸರಿಗೆ ಬದಲಾಯಿಸಬಹುದು. ಆದರೆ ಖಾತೆ ಬದಲಾವಣೆ ಆದ ಮಾತ್ರಕ್ಕೆ ಆಸ್ತಿ ಪೂರಾ ನಿಮ್ಮ ತಾಯಿಯ ಆಸ್ತಿ ಆಗುವುದಿಲ್ಲ.

ಕೇವಲ ನಾಲ್ಕನೇ ಒಂದು ಭಾಗ ಮಾತ್ರ ಅವರಿಗೆ ಸೇರುತ್ತದೆ ಅಷ್ಟೆ. ನಿಮ್ಮ ಸಹೋದರಿಯರು ಒಪ್ಪಿದರೆ , ಬೇಕಿದ್ದರೆ ಅವರು ಮತ್ತು ನೀವು ಎಲ್ಲರೂ ನೋಂದಾಯಿತ ಹಕ್ಕು ಬಿಡುಗಡೆ ಪತ್ರ/ರಿಲೀಜ್ ಪತ್ರವನ್ನು ನಿಮ್ಮ ತಾಯಿಯ ಹೆಸರಿಗೆ ಮಾಡಿಕೊಡಬಹುದು.

ಆಗ ಆಸ್ತಿಯ ಸಂಪೂರ್ಣ ಮಾಲೀಕರೂ ನಿಮ್ಮ ತಾಯಿಯೇ ಆಗುತ್ತಾರೆ. ಅನಂತರ ರೀಲೀಜ್ ಪತ್ರದ ದಾಖಲೆ ಕೊಟ್ಟರೆ, ಪಂಚಾಯ್ತಿಯವರು ನಿಮ್ಮ ತಾಯಿಯ ಹೆಸರಿಗೆ ಖಾತೆ ಮಾಡುತ್ತಾರೆ. ಖಾತೆ ಮಾಡಲು 30 ದಿನಗಳ ಸಮಯ ಹಿಡಿಯುತ್ತದೆ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net