

ಅನಕ್ಷರಸ್ಥೆಯಾಗಿರುವ ಕಾರಣ ಸಮ ಪಾಲಿನ ಬಗ್ಗೆ ಆಕೆಗೆ ಹೆಚ್ಚಿನ ಮಾಹಿತಿಯಿಲ್ಲ. ಕಾನೂನಿನ ಅನ್ಚಯ ಮಹಿಳೆಯರಿಗೆ ಸಮಪಾಲು ಬರಬೇಕೆಂದು ತಿಳಿದಿರುತ್ತೇನೆ. ನಮ್ಮ ತಾತ ಹಾಗೂ ಅಜ್ಜಿ ಜೀವಂತವಾಗಿದ್ದು ಈಗಾಗಲೇ ವಯಸ್ಸು 80 ದಾಟಿದೆ. ನಮ್ಮ ತಾತನ ಆಸ್ತಿಯಲ್ಲಿ ಸಮಪಾಲು ಪಡೆಯಲು ನಮ್ಮ ತಾಯಿ ಸೇರಿದಂತೆ ಮೂವರು ಹೆಣ್ಣು ಮಕ್ಕಳು ಅರ್ಹರೆ? ಈಗಿರುವ ಆಸ್ತಿ ಪತ್ರಕ್ಕೆ ಮಾನ್ಯವಿರುವುದಿಲ್ಲವೆ?
ಉತ್ತರ: ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಸಮಪಾಲು ಇದೆ ಎನ್ನುವುದನ್ನು 2005ರ ತಿದ್ದುಪಡಿ ಕಾಯ್ದೆಯ ಮೂಲಕ ಜಾರಿಗೆ ತರಲಾಯಿತು. ಆದರೆ ಹಿಂದೂವಾರಸಾ ಕಾಯ್ದೆ / ತಿದ್ದುಪಡಿ ಕಾಯ್ದೆಯ ಕಲಂ ಆರರಲ್ಲಿ 2004 ರ ಡಿಸೆಂಬರ್ ತಿಂಗಳಿಗೆ ಹಿಂದೆ ಆದ ಅಥವಾ ನೋಂದಾಯಿತವಾಗಿರುವ ವಿಭಾಗ ಪತ್ರಗಳ ಮೂಲಕ ಹಂಚಿಕೆ ಆಗಿರುವ ವಿಭಾಗವನ್ನು ಮತ್ತೆ ಕದಲಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಈ ಬಗ್ಗೆ ಸುಪ್ರೀಂ ಕೋರ್ಟಿನ 11/8/2020 ರ ವಿನೀತಾ ಶರ್ಮಾ ವಿರುದ್ಧ ರಾಕೇಶ ಶರ್ಮಾ ಮತ್ತು ಇತರರು 2020 (2) Kar .L.R.161 (SC) : 2020 S.C.C Online 641 ಪ್ರಕರಣದ ಮಹತ್ತರವಾದ ತೀರ್ಪಿನಲ್ಲಿ ಹೇಳಿರುವುದನ್ನು ಗಮನಿಸಬಹುದು. ಈ ತೀರ್ಪಿನಲ್ಲಿ ಮಗಳು ತನ್ನ ಹಕ್ಕನ್ನು 9/9/2005 ರ ತಾರೀಖಿನಲ್ಲಿ ಇರುವಂತೆ ಮಾತ್ರ ಕೇಳಬಹುದು.
ಹೀಗಾಗಿ , 9/9/2005 ಕ್ಕೆ ಹಿಂದೆ ಆಗಿರುವ ವ್ಯವಹಾರಗಳು ಕಲಂ 6(1) ಮತ್ತು 6(5) ರ ಪ್ರಾವಿಸೋ ಕೆಳಗೆ ರಕ್ಷಿಸಲ್ಪಡುತ್ತವೆ. 20/12/2004 ರ ಹಿಂದೆ ನೋಂದಾಯಿತ ವಿಭಾಗ ಪತ್ರದ ಮೂಲಕ ಅಥವಾ ನ್ಯಾಯಾಲಯದ ಡಿಕ್ರೀ ಮೂಲಕ ಆಗಿರುವ ವಿಭಾಗವನ್ನು, ಪರಭಾರೆಯನ್ನು, ಮರಣಶಾಸನವನ್ನು ತಿದ್ದುಪಡಿ ಕಾಯ್ದೆಯ ಲಾಭ ಪಡೆಯುವ ಹೆಸರಿನಲ್ಲಿ ಪ್ರಶ್ನಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.