

ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ನಿಮ್ಮ ಪತಿಯ ವಿರುದ್ಧ ಪ್ರಕರಣ ದಾಖಲಿಸಿ. ಅವರು ನಿಮ್ಮ ಮನೆಗೆ ಬರಬಾರದು ಎನ್ನುವ ಪ್ರೊಟೆಕ್ಷನ್ ಆರ್ಡರ್ /ರಕ್ಷಣೆಯ ಆದೇಶವನ್ನು ಪಡೆಯಿರಿ. ನಿಮ್ಮ ತಂದೆಯಿಂದಲೂ ನಿಮ್ಮ ಪತಿಯ ವಿರುದ್ಧ ಫಿರ್ಯಾದು ದಾಖಲಿಸಿ. ನಿಮ್ಮ ತಂಗಿಯನ್ನು ಮದುವೆಯಾಗಲು ಹಿಂಸೆ ಮಾಡುತ್ತಿದ್ದಾರೆ ಎನ್ನುವುದನ್ನೂ ನೀವು ಪ್ರಕರಣದಲ್ಲಿ ತಿಳಿಸಿ. ಹಾಗೆಯೇ ಅವಳಿಂದಲೂ ರಕ್ಷಣೆ ಕೋರಿ ಪೊಲೀಸರಿಗೆ ಅರ್ಜಿ ಸಲ್ಲಿಸಿ.
ಯಾವುದೇ ಕಾರಣಕ್ಕೂ ನಿಮ್ಮ ಪತಿ ನಿಮ್ಮ ತಂಗಿಯನ್ನು ಮದುವೆ ಆಗಲು ಒಪ್ಪಲೇ ಬೇಡಿ. ಒಬ್ಬ ಪತ್ನಿ ಬದುಕಿರುವಾಗ ಆಕೆಯಿಂದ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆ ಆಗವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನಿಮಗೆ ಆತ ವಿಚ್ಛೇದನ ಕೊಡುತ್ತೇನೆ ಎಂದು ಹೆದರಿಸಿದರೆ ನೀವು ಹೆದರಬೇಡಿ. ಇಂತಹ ವ್ಯಕ್ತಿಯ ಜತೆ ವೈವಾಹಿಕ ಸಂಬಂಧ ಇಟ್ಟುಕೊಂಡು ನಿಮಗೆ ಬರುವ ಲಾಭವಾದರೂ ಏನು? ಮೇಲಾಗಿ ವಿಚ್ಛೇದನವನ್ನು ಯಾರೂ ಯಾರಿಗೂ ಕೊಡಲಾಗುವುದಿಲ್ಲ. ವಿಚ್ಛೇದನ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ತಾನೇ ತಪ್ಪು ಮಾಡಿ, ವಿಚ್ಛೇದನ ಪಡೆಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಆತ ಪ್ರಕರಣ ದಾಖಲಿಸಲಿ. ನೀವು ಧೈರ್ಯವಾಗಿ ಎದುರಿಸಿ. ಆತನನ್ನು ಪೋಷೊಸುವುದನ್ನು ಇನ್ನಾದರೂ ನಿಲ್ಲಿಸಿ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)