

ಪ್ರಶ್ನೆ: ನನ್ನ ಪ್ರಶ್ನೆ ಏನೆಂದರೆ ತಂದೆಯಾದವರು ತನ್ನ ಒಬ್ಬ ಮಗನಿಗೆ ಅಥವಾ ಒಬ್ಬ ಮಗನ ಮಗನಿಗೆ ಮಾತ್ರ ತನ್ನ ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದೇ? ಮತ್ತೊಬ್ಬ ಮಗನಿಗೆ ಹೆಣ್ಣು ಮಕ್ಕಳು ಇದ್ದಾರೆ ಎಂದು ಅವರಿಗೆ ವಿಲ್ ಮಾಡದೆಯೇ ಇರಬಹುದೇ? ಕೋರ್ಟಿನಲ್ಲಿ ಪ್ರಕರಣ ಬಾಕಿ ಇದ್ದರೂ ವಿಲ್ ಮಾಡಬಹುದೇ?
ಉತ್ತರ: ಸ್ವಯಾರ್ಜಿತ ಆಸ್ತಿಯನ್ನು ಒಬ್ಬ ವ್ಯಕ್ತಿ ಹೇಗೆ ಬೇಕಾದರೂ ತನ್ನ ಜೀವಿತ ಕಾಲದಲ್ಲಿ ವಿಲೇವಾರಿ ಮಾಡಬಹುದು. ಯಾರಿಗೆ ಬೇಕಾದರೂ, ಯಾವ ಕಾರಣದಿಂದ ಬೇಕಾದರೂ ಕೊಡಬಹುದು. ಅದನ್ನು ಯಾರೂ ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ.
ಕೋರ್ಟಿನಲ್ಲಿ ಪ್ರಕರಣ ಬಾಕಿ ಇರುವಾಗ ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದು, ಪ್ರಕರಣ ನಡೆಯುತ್ತಿರುವಾಗ , ವಿಲ್ ಮಾಡಿದವರು ತೀರಿಹೋದರೆ, ಯಾರಿಗೆ ವಿಲ್ ಮಾಡಿರುತ್ತಾರೋ ಅವರು ಪ್ರಕರಣವನ್ನು ಮುಂದುವರೆಸಬಹುದು. ಪ್ರಕರಣ ನಡೆಯುವಾಗ ಬದುಕಿದ್ದು, ಪ್ರಕರಣದಲ್ಲಿ ವಿಲ್ ಮಾಡಿದವರು ಸೋತರೆ, ಆಗ , ಯಾರಿಗೆ ವಿಲ್ ಮಾಡಿರುತ್ತಾರೋ ಅವರಿಗೆ ಯಾವ ಹಕ್ಕೂ ಬರುವುದಿಲ್ಲ ಅಷ್ಟೆ.
(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್ ಮಾಡಿದರೆ ಎಲ್ಲವೂ ಲಭ್ಯ.)
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)