ಪಾಲಕರು ಬಲವಂತ ಮಾಡಿ ಮಕ್ಕಳ ಮದುವೆ ಮಾಡಿದರೆ ಕಾನೂನು ಏನು ಹೇಳುತ್ತದೆ?

nyaya-2.
Published on

ಪ್ರಶ್ನೆ:

ನ್ನ ಸೋದರ ಮಾವನಿಗೆ ಎರಡು ಮಕ್ಕಳು . ಎರಡನೇ ಮಗಳು ಇನ್ನೂ ಓದುತ್ತಿದಾಳೆ. ಸಂಬಂಧಿಕರು ಎರಡನೇ ಹುಡುಗಿಯನ್ನು ನನಗೇ ಕೊಟ್ಟು ಮದುವೆ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ನನ್ನ ಪೋಷಕರು ನನಗೆ ಒಳ್ಳೆ ಸಂಬಂಧ ಹುಡುಕಿ ನನ್ನ ಮದುವೆಯನ್ನು ಮಾಡುವುದರಲ್ಲಿ ತುಂಬಾ ನಿದಾನವಾಗಿದ್ದಾರೆ. ನನಗೆ ಹೆದರಿಕೆ ಏನೆಂದರೆ ಇನ್ನೆರಡು ಮೂರು ವರ್ಷ ಕಳೆದ ಮೇಲೆ ನನ್ನನ್ನು ಆ ಎರಡನೇ ಹುಡುಗಿಗೇ ಕೊಟ್ಟು ಮದುವೆ ಮಾಡಿಬಿಟ್ಟರೆ ಎಂದು ಭಯ ಆಗಿದೆ. ದಯವಿಟ್ಟು ಇದನ್ನು ತಪ್ಪಿಸಲು ಸಲಹೆ ಕೊಡಿ.

ಉತ್ತರ: ವಿವಾಹ ಎನ್ನುವುದು ಯಾರೋ ಹೇಳಿದ್ದನ್ನು ಯಾರೋ ಕೇಳಿ ಯಾರನ್ನೋ ಮದುವೆ ಆಗುವ ವ್ಯವಸ್ಥೆ ಅಲ್ಲ. ಅದಕ್ಕಾಗಿಯೇ ಕಾನೂನಿನಲ್ಲಿ 21 ವರ್ಷ ಕಳೆದಿರುವ ಪುರುಷ 18 ವರ್ಷ ಕಳೆದಿರುವ ಸ್ತ್ರೀಯನ್ನು ಮದುವೆ ಆಗಬೇಕು ಎಂದಿರುವುದು. ಆಗ , ಜೀವನದ ನಿರ್ಣಯ ತೆಗೆದುಕೊಳ್ಳಲು ಸಾಮಥ್ರ್ಯ ಇರುತ್ತದೆ ಎನ್ನುವುದಕ್ಕಾಗಿಯೇ.

ನೀವು ಯಾರನ್ನು ಮದುವೆ ಆಗಬೇಕು ಬಿಡಬೇಕು ಎನ್ನುವುದು ನಿಮ್ಮ ವಯಕ್ತಿಕ ಇಷ್ಟಕ್ಕೆ ಹಾಗೂ ನಿಮ್ಮನ್ನು ಮದುವೆ ಆಗುವವರ ವಯಕ್ತಿಕ ಒಪ್ಪಿಗೆಗೆ ಬಿಟ್ಟ ವಿಷಯ. ನಿಮ್ಮ ಸಂಬಂಧಿಕರು ಹೇಳಿದರೆಂದು ನೀವಾಗಲೀ ನಿಮ್ಮ ಸೋದರ ಮಾವನ ಎರಡನೇ ಮಗಳಾಗಲೀ ಮದುವೆಗೆ ಒಪ್ಪಬೇಕಾಗಿಲ್ಲ. ನೀವು ಇಂತಹವರನ್ನು ಮದುವೆ ಆಗುತ್ತೇನೆ ಅಥವಾ ಇಲ್ಲ ಎಂದು ಹೇಳಲು ಹೆದರಬೇಕಾಗಿಲ್ಲ. ಯಾರೂ ನಿಮ್ಮನ್ನು ಬಲವಂತ ಮಾಡಿ ನಿಮಗೆ ಮದುವೆ ಮಾಡಲು ಆಗುವುದಿಲ್ಲ. ಸುಮ್ಮನೆ ಊಹೆಯಲ್ಲಿ ಭಯ ಪಡಬೇಡಿ.

ಹಾಗೆ ಬಲವಂತದಿಂದ ಮದುವೆ ಮಾಡಿದಾಗಲೂ ಅಂತಹ ಮದುವೆಗಳನ್ನು ಶೂನ್ಯೀಕರಣಗೊಳಿಸಲು ಅರ್ಜಿ ಸಲ್ಲಿಸಬಹುದು. ಆದರೆ ನೀವು ಆ ಹಂತದವರೆಗೆ ಹೋಗದೆ. ನಿಮಗೆ ಇಷ್ಟವಿಲ್ಲದ ಹುಡುಗಿಯನ್ನು ಮದುವೆಯಾಗಲು ಒಪ್ಪದೇ ಇರುವುದು ಒಳ್ಳೆಯದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net