

ನವದೆಹಲಿ: ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯಿಂದ ತತ್ತರಿಸಿಹೋಗಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಇದೀಗ ಭರ್ಜರಿ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಚರಂಡಿ ನೀರು ಮತ್ತು ಘನ ತ್ಯಾಜ್ಯ ಬಳಸಿ ಉತ್ಪಾದಿಸುವ ಹಸಿರು ಹೈಡ್ರೋಜನ್ ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳನ್ನು ತಯಾರಿಸಲು ಸರ್ಕಾರ ನಿರ್ಧರಿಸಿದೆ.
ಇದಾಗಲೇ ಪೆಟ್ರೋಲ್, ಡೀಸೆಲ್ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ವಿದ್ಯುತ್ ಚಾಲಿತ ವಾಹನಗಳು ಭಾರಿ ಬೇಡಿಕೆ ಕುದುರಿಸಿಕೊಂಡಿರುವ ಬೆನ್ನಲ್ಲೇ ಹೈಡ್ರೋಜನ್ ಇಂಧನ ಚಾಲಿತ ವಾಹನಗಳೂ ರೆಡಿಯಾಗುತ್ತಿವೆ. ಇದೀಗ ಚರಂಡಿ ನೀರು ಮತ್ತು ಘನ ತ್ಯಾಜ್ಯ ಬಳಸಿ ಉತ್ಪಾದಿಸುವ ಹಸಿರು ಹೈಡ್ರೋಜನ್ ಬಸ್‌ಗಳು, ಟ್ರಕ್‌ಗಳು ಮತ್ತು ಕಾರು ಬರಲಿವೆ.
ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆ ಸಂಪೂರ್ಣ ಯಶಸ್ವಿಯಾದರೆ ಶೀಘ್ರದಲ್ಲಿಯೇ ಪೆಟ್ರೋಲ್, ಡೀಸೆಲ್‌ಗಳಿಂದ ರೋಸಿಹೋಗಿರುವ ಜನರಿಗೆ ಅನುಕೂಲ ಆಗುವುದರ ಜತೆಜತೆಗೇ ಪರಿಸರಕ್ಕೂ ಧಕ್ಕೆ ಆಗುವುದಿಲ್ಲ. ಇದಾಗಲೇ ವಿಪರೀತ ವಾಯುಮಾಲಿನ್ಯದಿಂದ ದೆಹಲಿ ತತ್ತರಿಸಿ ಹೋಗಿರುವುದನ್ನು ನಾವೆಲ್ಲಾ ನೋಡಬಹುದಾಗಿದೆ. ಮಾಲಿನ್ಯಕ್ಕೆ ತನ್ನದೇ ಆದ ದೊಡ್ಡ ಕೊಡುಗೆ ನೀಡುತ್ತಿರುವ ವಾಹನಗಳು ಇನ್ನು ಮುಂದೆ ಪರಿಸರಸ್ನೇಹಿ ಮಾಡಲು ಈ ಯೋಜನೆ ರೂಪಿಸಲಾಗಿದೆ.
ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆ ಉತ್ಪಾದಿಸಿ ಹಸಿರು ಹೈಡ್ರೋಜನ್ ಇಂಧನದಿಂದ ಚಲಿಸುವ ಕಾರನ್ನು ಖರೀದಿಸಿದ್ದು, ಶೀಘ್ರದಲ್ಲಿಯೇ ತೈಲದರ ಬೆಲೆಯ ಏರಿಕೆಯ ತಲೆಬಿಸಿಯಿಂದ ಜನರು ನಿರಾಳರಾಗಬಹುದು ಎಂದಿದ್ದಾರೆ.