

ಗಾಂಧಿನಗರ (ಗುಜರಾತ್): ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರಿಗೆ ಇದಾಗಲೇ ದೇಶಾದ್ಯಂತ ಅಭಿನಂದನೆಗಳು, ಬಹುಮಾನಗಳ ಸುರಿಮಳೆ ಬರುತ್ತಿದೆ. ಹಲವರು ತಮ್ಮದೇ ಆದ ರೀತಿಯಲ್ಲಿ ಶುಭಾಶಯ ಹೇಳುತ್ತಿದ್ದಾರೆ.
ಇದೀಗ ಗುಜರಾತ್ನ ಭರೂಚ್ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಉಚಿತ ಪೆಟ್ರೋಲ್ ಆಫರ್ ನೀಡಿದ್ದಾರೆ. ಆದರೆ ಅದು ನೀರಜ್ ಎಂದು ಹೆಸರು ಇರುವವರಿಗೆ ಮಾತ್ರ. ಈ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವುದಾಗಿ ಅವರು ಹೇಳಿದ್ದಾರೆ.
ಎರಡು ದಿನ ಈ ಆಫರ್ ನಿಡಲಾಗುವುದು. ಪೆಟ್ರೋಲ್ ಹಾಕಿಸಿಕೊಳ್ಳುವಾಗ ಗುರುತಿನ ಚೀಟಿ ತೋರಿಸಬೇಕು. ವೇಳೆ ವ್ಯಕ್ತಿಯ ಹೆಸರು ನೀರಜ್ ಎಂದು ಇದ್ದರೆ ಅವರಿಗೆ ಉಚಿತವಾಗಿ ಪೆಟ್ರೋಲ್, ಡೀಸೆಲ್ ನೀಡಲಾಗುವುದು ಎಂದಿದ್ದಾರೆ ಆಯುಬ್.