ಬಟ್ಟೆ ತೆಗೆಯದಿದ್ದರೂ, ಒಳ ಉಡುಪು ಇದ್ದಾಗ ದೌರ್ಜನ್ಯ ಎಸಗಿದರೂ ಅದು ಅತ್ಯಾಚಾರವೇ ಎಂದ ಹೈಕೋರ್ಟ್​

rape
Published on

ಶಿಲ್ಲಾಂಗ್ (ಮೇಘಾಲಯ): ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇದಾಗಲೇ ಹಲವಾರು ತೀರ್ಪುಗಳನ್ನು ವಿವಿಧ ಕೋರ್ಟ್​ಗಳು ನೀಡುತ್ತಲೇ ಬಂದಿವೆ. ಅತ್ಯಾಚಾರಿಗಳು ತಮ್ಮನ್ನು ತಾವು ಬಚಾವ್​ ಮಾಡಿಕೊಳ್ಳಲು ಹಲವಾರು ಕಾರಣಗಳನ್ನೂ ನೀಡುತ್ತ ಬರುತ್ತಲೇ ಇದ್ದಾರೆ.

ಇದರ ನಡುವೆ ಮೇಘಾಲಯ ಹೈಕೋರ್ಟ್‌ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ನೀಡಿದೆ. ಅದೇನೆಂದರೆ, ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಗಳಿದ್ದರೂ ಆಗ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಕೋರ್ಟ್​ ಹೇಳಿದೆ.

2006ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯಾಂಗ್‌ಡೋ ಅವರ ವಿಭಾಗೀಯ ಪೀಠವು ಈ ತೀರ್ಪು ಪ್ರಕಟಿಸಿದೆ. 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 2018ರ ಅಕ್ಟೋಬರ್‌ 31ರಂದು ಸೆಷನ್ಸ್ ಕೋರ್ಟ್​ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅದನ್ನು ಆತ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ.

ತಾನು ಆಕೆಯ ಒಳ ಉಡುಪುಗಳನ್ನು ತೆಗೆದಿಲ್ಲ, ಆದ್ದರಿಂದ ಇದು ರೇಪ್​ ಆಗುವುದಿಲ್ಲ ಎಂದು ವಾದಿಸಿದ್ದ. ಘಟನೆ ನಡೆದ ದಿನ ತನ್ನನ್ನು ನಿಯಂತ್ರಿಸಲು ಸಾಧ್ಯವಾಗದೆ ಭಾವೋದ್ವೇಗಕ್ಕೆ ಒಳಗಾಗಿದ್ದಾಗಿ ಆತ ಹೇಳಿದ್ದ. ಆದರೆ ಇದು ಅತ್ಯಾಚಾರ ಆಗುವುದಿಲ್ಲ ಎಂಬ ವಾದವನ್ನು ಕೋರ್ಟ್​ ಒಪ್ಪಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net