ಸಮಂತಾ ಮುಗಿದ ಮೇಲೆ ಶೋಭಿತಾ? ಕೊನೆಗೂ ಈ ರೀತಿ ಮೌನ ಮುರಿದ ನಟ ನಾಗಚೈತನ್ಯ

nagachaitanya
Published on

ಮುಂಬೈ: ಕಳೆದ ವರ್ಷ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ಬ್ರೇಕಪ್​ ಬಹಳ ಸುದ್ದಿ ಮಾಡಿತ್ತು. ಅಭಿಮಾನಿಗಳಿಗೆ ಬಹಳ ಆಘಾತ ತಂದಿದ್ದ ಸುದ್ದಿ ಇದಾಗಿತ್ತು. ಇದಾಗ ಮೇಲೆ ಹಲವಾರು ಬೆಳವಣಿಗೆಗಳು ನಡೆದೇ ಹೋದವು.

ಇದಾದ ಬಳಿಕ ಇತ್ತೀಚೆಗೆ ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ 7ನೇ ಸೀಸನ್​ನ 3ನೇ ಎಪಿಸೋಡ್​ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಕರಣ್​ ಕೇಳಿರುವ ಪ್ರಶ್ನೆಗೆ ಮಾಜಿ ಪತಿ ನಾಗಚೈತನ್ಯ ಜೊತೆಗಿನ ತನ್ನ ಸಂಬಂಧ ಹಾಗೂ ಕೆಲವು ವದಂತಿಗಳ ಬಗ್ಗೆ ಮಾತನಾಡಿದ್ದರು. ಕರಣ್​ ಜೋಹರ್​, ನಾಗಚೈತನ್ಯರನ್ನು ನಿಮ್ಮ ಪತಿ ಎಂದು ಸಂಭೋದಿಸಿದಾಗ ತಕ್ಷಣ ಅದನ್ನು ಸರಿಪಡಿಸಿದ ಸಮಂತಾ ಪತಿಯಲ್ಲ, ಮಾಜಿ ಪತಿ ಎಂದರು. ಅದನ್ನು ಸರಿಪಡಿಸಿಕೊಂಡ ಬಳಿಕ ಸಮಂತಾರನ್ನು ಉದ್ದೇಶಿಸಿ, ನೀವು ಮತ್ತು ನಾಗಚೈತನ್ಯ ಸೌಹಾರ್ದಯುತವಾಗಿದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ್ದ ಸಮಂತಾ, ನೀವು ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ, ನೀವು ಚೂಪಾದ ವಸ್ತುಗಳನ್ನು ಮರೆಮಾಡಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ? ಸದ್ಯದ ಪರಿಸ್ಥಿತಿಯಲ್ಲಿ ಇದು ಹೌದು ಎಂದಿದ್ದರು. ಕೂಡಲೇ ಬಹುಶಃ ಭವಿಷ್ಯದಲ್ಲಿ ನೀವು ಹೇಳಿದ್ದು ಆಗಬಹುದು ಎಂದಿದ್ದರು.

ಆದರೆ ಇದರ ನಡುವೆಯೇ ನಾಗಚೈತನ್ಯಾ ಮತ್ತು ನಟಿ ಶೋಭಿತಾ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇವರಿಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ. ಇವರಿಬ್ಬರೂ ಹಲವಾರು ಕಡೆಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿರುವುದು ಕೂಡ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.

ಆದರೆ ಅಭಿಮಾನಿಗಳಲ್ಲಿ ಇರುವ ಪ್ರಶ್ನೆಗೆ ಕೊನೆಗೂ ನಾಗಚೈತನ್ಯ ಪರೋಕ್ಷವಾಗಿ ಉತ್ತರಿಸಿದ್ದಾರೆ. ನಾಗಚೈತನ್ಯ ಅವರ ಮುಂಬರುವ ಚಿತ್ರ `ಲಾಲ್ ಸಿಂಗ್ ಚಡ್ಡಾ’ ಕುರಿತು ನಡೆಸಲಾದ ಸಂದರ್ಶನದಲ್ಲಿ ಅವರಿಗೆ ನಟಿ ಶೋಭಿತಾ ಕುರಿತು ಪ್ರಶ್ನೆ ಎದುರಾಗಿದೆ. ನಿರೂಪಕಿ ಶೋಭಿತಾ ಜತೆಗಿನ ಒಡನಾಟದ ಬಗ್ಗೆ ಕೇಳಿದ ಪ್ರಶ್ನಿಗೆ ನಗುವಿನ ಮೂಲಕ ಉತ್ತರಿಸಿದ್ದಾರೆ ನಾಗಚೈತನ್ಯ.

ವಿಜಯ್ ದೇವರಕೊಂಡ ಅವರ ಕುರಿತು ಒಂದು ಶಬ್ದ ಹೇಳಿ ಎಂದಾಗ, ನಾಗಚೈತನ್ಯ ಅವರು, 'ಕ್ರೇಜಿ' ಎಂದು ಹೇಳಿದರು. ರಾಶಿ ಖನ್ನಾ ಬಗ್ಗೆ 'ಗ್ರೇಟ್ ಫ್ರೆಂಡ್' ಎಂದು ಹೇಳಿದರು. ಕೃತಿ ಶೆಟ್ಟಿಗೆ 'ಬೇಬಿ' ಎಂದು ಹೇಳಿದರು. ಬಳಿಕ ನಿರೂಪಕರು ಶೋಭಿತಾ ಎಂದು ಕೇಳಿದರು. ಕೂಡಲೇ ಒಂದು ಕ್ಷಣ ಮೌನಕ್ಕೆ ಜಾರಿದ ನಾಗಚೈತನ್ಯ ಜೋರಾಗಿ ನಗಲು ಪ್ರಾರಂಭಿಸಿದರು. ಇದಕ್ಕೆ ನನ್ನ ನಗುವೆ ಉತ್ತರ ಎಂದರು.. ನಾನು ಈ ಪ್ರಶ್ನೆಗೆ ನಗುವಿನ ಮೂಲಕವಾಗಿಯೇ ಉತ್ತರಿಸುತ್ತೇನೆ, ಧನ್ಯವಾದ ಎಂದು ಹೇಳಿರುವುದು ಇವರ ನಡುವಿನ ಸಂಬಂಧದ ಕುರಿತು ಸಾಬೀತು ಮಾಡುತ್ತಿದೆ ಎಂದೇ ಹೇಳಲಾಗುತ್ತಿದೆ.

ಅಂದಹಾಗೆ ನಾಗಚೈತನ್ಯ ಮೊದಲ ಬಾರಿಗೆ ಹಿಂದಿಯಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಮೀರ್ ಖಾನ್ ಸ್ನೇಹಿತನಾಗಿ ನಾಗ್ ಚೈತನ್ಯ ಮಿಂಚಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net