ಎಸ್.ಎನ್.ನಾರಾಯಣಸ್ವಾಮಿ ಡೆಲಿಗೇಟ್ ಅಂಗೀಕಾರ

btp mla
ಎಸ್​.ಎನ್​.ನಾರಾಯಣಸ್ವಾಮಿ
Published on

ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಡೆಲಿಗೇಟ್ ಅಂಗೀಕಾರವಾಗಿದ್ದು, ಅಡ್ಡಿ ಪಡಿಸಿದವರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೆತ್ತಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದಿAದ ಮತ ಹಕ್ಕು (ಡೆಲಿಗೇಟ್) ಪಡೆದುಕೊಂಡು, ಕೋಮುಲ್ ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪಽðಸಲು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುಂದಾಗಿದ್ದರು.

ಆದರೆ ಇದನ್ನು ತಡೆಯಲು ಯತ್ನಿಸಿದ್ದ ಕಾಂಗ್ರೆಸ್‌ನವರ ಪ್ರಯತ್ನಕ್ಕೆ ವಿಫಲವಾಗಿದೆ. ನಾರಾಯಣಸ್ವಾಮಿ ಅವರು ಅನಽಕೃತವಾಗಿ ಮತ ಹಕ್ಕು ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿ ಹೈ ಕೋರ್ಟ್ ಮೋರೆ ಹೋಗಿದ್ದರು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಽÃಶರು ಜಿಲ್ಲಾಽಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದ್ದರು.

ಅದರಂತೆ ಪರಿಶೀಲನೆ ನಡೆಸಿರುವ ಜಿಲ್ಲಾಽಕಾರಿ ಡಾ.ಎಂ.ಆರ್.ರವಿ ಅವರು ಡೆಲಿಗೇಟ್ ಅನ್ನು ಅಂಗೀಕರಿಸಿದ್ದಾರೆ.

ಎಸ್.ಎನ್.ನಾರಾಯಣಸ್ವಾಮಿ ಅವರು ಹಾಲು ಉತ್ಪಾದಕರ ಸಂಘಕ್ಕೆ ಹಾಲು ಸರಬರಾಜು ಮಾಡಿಲ್ಲ, ಖಾತೆಗೆ ಹಾಲಿನ ಬಟವಾಡೆ ಜಮೆ ಆಗಿಲ್ಲ. ಆದರೂ ಸಹ ಡೆಲಿಗೇಟ್ ಪಡೆದುಕೊಂಡು ಕೋಮುಲ್ ಸರ್ವ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದವರು. ಆಗಲು ಸಹ ನಾರಾಯಣಸ್ವಾಮಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಕೆಲವರು ಜಿಲ್ಲಾ ಸಹಕಾರ ಇಲಾಖೆಯ ಉಪ ನಿಬಂಧಕರ ಅಽಕಾರಿಗಳಿಗೆ ದೂರು ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗಲು ಸಹ ಯಾವುದೇ ರೀತಿ ಹಿನ್ನಡೆಯಾಗಲಿಲ್ಲ. ಇದೀಗ ಮತದಾನದ ಹಕ್ಕಿಗೆ ಅನುಮತಿ ದೊರೆತ್ತಿರುವುದು ಎದುರಾಳಿಗೆ ತಲೆ ಬಿಸಿಯಾಗಿದೆ.

ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಮುಂದೆ ಬಂದಿದ್ದಾರೆ. ಅದನ್ನು ಹೇಗಾದರು ಮಾಡಿ ತಡೆಯಬೇಕು ಎಂದು ಕೆಲವರು ಕೋರ್ಟ್ ಮೋರೆ ಹೋಗಿದ್ದರು. ಇದೀಗ ನಾರಾಯಣಸ್ವಾಮಿ ಪರ ಆದೇಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net