

ನವದೆಹಲಿ: ಫೋರ್ಬ್ ಇಂಡಿಯಾ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಟಾಪ್ 1 ಸ್ಥಾನದಲ್ಲಿದ್ದಾರೆ. ಸತತ 13ನೇ ವರ್ಷ ಅಗ್ರಸ್ಥಾನದಲ್ಲಿ ಇರುವ ಶ್ರೀಮಂತ ಎಂಬ ಹೆಗ್ಗಳಿಕೆಯನ್ನು ಇವರು ಪಡೆದುಕೊಂಡಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ಮುಖೇಶ್ ಅವರ ಆಸ್ತಿ ಮೌಲ್ಯ ಶೇ. 14ರಷ್ಟು ಏರಿಕೆಯಾಗಿದೆ. 517. 5 ಬಿಲಿಯನ್ ಡಾಲರ್ಗೆ ಅವರ ಆಸ್ತಿಯ ಮೌಲ್ಯ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರು ತಮ್ಮ ಆಸ್ತಿಗೆ 37.3 ಬಿಲಿಯನ್ ಹೆಚ್ಚುವರಿ ಸೇರಿಸಿದ್ದಾರೆ. ಈ ಮೂಲಕ ಒಟ್ಟೂ ಆಸ್ತಿಯ ಮೌಲ್ಯ ಶೇ. 73 ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ವಿವರಣೆ ನೀಡಿದೆ.
ಇನ್ನು ಫೋರ್ಬ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಎರಡನೆಯ ಸ್ಥಾನವನ್ನು ಉದ್ಯಮಿ ಗೌತಮ್ ಅದಾನಿ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 25.2 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
ಮೂರನೆಯ ಸ್ಥಾನದಲ್ಲಿ ಇರುವವರು ಟೆಕ್ ಉದ್ಯಮಿ ಶಿವ ನಾಡರ್. ಕಳೆದ ಜುಲೈನಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ನ ಅಧ್ಯಕ್ಷ ಹುದ್ದೆಯನ್ನು ತಮ್ಮ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅವರಿಗೆ ವಹಿಸಿದ್ದ ನಾಡರ್, 20.4 ಬಿಲಿಯನ್ ಆಸ್ತಿ ಹೊಂದಿದ್ದಾರೆ.
ಅವಿನ್ಯೂ ಸೂಪರ್ ಮಾರ್ಟ್ಸ್ ನ ರಾಧಾಕೃಷ್ಣನ್ ದಾಮಾನಿ 15.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನ, ಹಿಂದೂಜಾ ಸಹೋದರರು 12. 8 ಬಿಲಿಯನ್ ಡಾಲರ್ನೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಸೈಕ್ರಾಸ್ ಪೂನಾವಾಲಾ 11. 5 ಬಿಲಿಯನ್ ಡಾಲರ್ನೊಂದಿಗೆ 6ನೇ ಸ್ಥಾನ, ಪಾಲೊಂಜಿ ಮಿಸ್ತ್ರೀ, ಉದಯ್ ಕೊಟಕು, ಗೋದ್ರೆಜ್ ಕುಟುಂಬ ಮತ್ತು ಲಕ್ಷ್ಮಿ ಮಿತ್ತಲ್ ಕ್ರಮವಾಗಿ 7,8,9 ಮತ್ತು 10ನೇ ಸ್ಥಾನದಲ್ಲಿದ್ದಾರೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.