

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬಂಗಾಳಿ ನಟಿ ನುಸ್ರತ್ ಜಹಾನ್ ಅವರೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ, ಅವರು ಆರು ತಿಂಗಳ ಗರ್ಭಿಣಿಯೆಂಬುದು. ಈ ಕುರಿತು ಹಲವಾರು ಫೋಟೋಗಳನ್ನು ಅವರು ಹಾಕಿಕೊಂಡಿದ್ದಾರೆ.
ಮದುವೆಯಾದ ಮೇಲೆ ಗರ್ಭ ಧರಿಸಿದ್ದರೆ ಇದು ಅಷ್ಟೇನೂ ಸುದ್ದಿಯಾಗುತ್ತಿರಲಿಲ್ಲ. ಆದರೆ ಕುತೂಹಲದ ಸಂಗತಿ ಎಂದರೆ, ಈಕೆಯ ಪತಿ, ಉದ್ಯಮಿ ನಿಖಿಲ್ ಜೈನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಅದೇನೆಂದರೆ ನಾವಿಬ್ಬರೂ ಆರು ತಿಂಗಳು ದೈಹಿಕ ಸಂಪರ್ಕವನ್ನೇ ಬೆಳೆಸಲಿಲ್ಲ, ಹಾಗಿದ್ದ ಮೇಲೆ ಆರು ತಿಂಗಳ ಗರ್ಭಿಣಿಯಾದರೆ ಆ ಮಗು ನನ್ನದ್ಹೇಕೆ ಆಗುತ್ತದೆ ಎಂದಿದ್ದಾರೆ! ಇದಕ್ಕಾಗಿಯೇ ಈ ವಿಷಯ ಈಗ ಒಬ್ಬೊಬ್ಬರ ಬಾಯಲ್ಲಿ, ಒಂದೊಂದು ರೀತಿಯ ಸ್ವರೂಪ ತಾಳುತ್ತಿದೆ.
ಆದರೆ ಈ ಕುರಿತು ಸುಸ್ರತ್ ಜಹಾನ್ ಮಾತ್ರ ಬಾಯಿ ಬಿಟ್ಟಿಲ್ಲ. ಮೌನಕ್ಕೆ ಜಾರಿರುವ ಅವರು, ಹಳೆಯ ಫೋಟೋಶೂಟ್ ವಿಡಿಯೋ ಹಂಚಿಕೊಂಡು "ಗಟ್ಟಿಯಾಗಿರಿ, ನಿರ್ಭೀತಿಯಿಂದಿರಿ, ಸುಂದರವಾಗಿರಿ" ಎಂದಷ್ಟೇ ಶೀರ್ಷಿಕೆ ಕೊಟ್ಟಿದ್ದಾರೆ.
ಅಂದಹಾಗೆ, ನುಸ್ರತ್ ಮತ್ತು ನಿಖಿಲ್ ಅವರ ಮದುವೆ 2019ರ ಜೂನ್ ತಿಂಗಳಿನಲ್ಲಿ ಆಗಿದೆ. ಇವರು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ಸಂಪ್ರದಾಯದಂತೆ ಮದುವೆಯಾಗಿ ಭಾರಿ ಸುದ್ದಿಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಇವರು ಮಿಸ್ ಕೋಲ್ಕತಾ ಕೂಡ ಆಗಿದ್ದರು. ಯೂತ್ ಐಕಾನ್ ಎಂಬ ಬಿರುದು ನೀಡಿ ಇವರನ್ನು ಗೌರವಿಸಲಾಗಿತ್ತು ಕೂಡ.
ಇಷ್ಟೆಲ್ಲಾ ಗಲಾಟೆಯ ನಡುವೆಯೇ ನಿಖಿಲ್ ಜೈನ್ ಅವರು ನಮ್ಮ ಮದುವೆ ಮುರಿದು ಬಿದ್ದಿದೆ ಎಂಬ ಹೇಳಿಕೆ ನೀಡಿದ್ದಾರೆ. ಆರು ತಿಂಗಳಿನಿಂದ ನಮ್ಮದು ಬ್ರೇಕ್ ಅಪ್ ಆಗಿದೆ. ಈ ಮಗು ನನ್ನದಾಗಲು ಹೇಗೆ ಸಾಧ್ಯ ಎಂದಿದ್ದಾರೆ. ಸಾಲದು ಎಂಬುದಕ್ಕೆ ಇಬ್ಬರೂ ಜತೆಗಿರುವ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ. ಒಟ್ಟಿನಲ್ಲಿ ಗರ್ಭವತಿಯಾಗಿರು ವಿಷಯ ಮಾತ್ರ ಕಮೆಂಟಿಗರಿಗೆ ಆಹಾರವಾಗಿದೆ.