ಅರೆಬೆತ್ತಲೆ ಫೋಟೋಗೆ ಪೋಪ್ ಕೊಟ್ಟರಂತೆ ಲೈಕ್​- ಅವರನ್ನು ಹುಡುಕಿ ಹೋಗ್ತಾಳಂತೆ ಈಕೆ...

pope3
Published on

ವ್ಯಾಟಿಕನ್ ಸಿಟಿ: ಬ್ರೆಜಿಲಿಯನ್ ಮಾಡೆಲ್ ನಟಾಲಿಯಾ ಗರಿಬಾಟ್ರೋ ಇದೀಗ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾಳೆ. ಇದಕ್ಕೆ ಕಾರಣ ಈಕೆಯ ಕಾಮಪ್ರಚೋದಕ ಫೋಟೋ!

ಅಷ್ಟಕ್ಕೂ ಕಾಮಪ್ರಚೋದಕ ಫೋಟೋವನ್ನು ಮಾಡೆಲ್​ಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವುದು ವಿಶೇಷವೇನಲ್ಲ. ಈಕೆಯ ಈ ಫೋಟೋಗೆ ಇಷ್ಟೊಂದು ಡಿಮಾಂಡ್​ ಬರಲು ಕಾರಣ, ಕ್ರೈಸ್ತರ ಅತ್ಯುನ್ನತ ಪಾದ್ರಿ ಎನಿಸಿರುವ ಪೋಪ್ ಫ್ರಾನ್ಸಿಸ್ ಇದಕ್ಕೆ ಲೈಕ್​ ಮಾಡಿದ್ದಾರಂತೆ!

ಈ ಲೈಕ್​ ಕಂಡಿರುವ ಮಾದಕ ನಟಿಗೆ ಸ್ವರ್ಗವೇ ಸಿಕ್ಕಂತಾಗಿದೆಯಂತೆ. ಅವಳ ಅರೆಬೆತ್ತಲೆ ಫೋಟೋ ವೈರಲ್​ ಆಯಿತೋ ಬಿಡ್ತೋ ಗೊತ್ತಿಲ್ಲ... ಆದರೆ ಪೋಪ್​ ಲೈಕ್​ ಮಾಡಿರುವ ಸ್ಕ್ರೀನ್​ಷಾಟ್​ ಅಂತೂ ಇದೀಗ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ಪೋಪ್ ಫ್ರಾನ್ಸಿಸ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ನನ್ನ ಫೋಟೋಗೆ ಲೈಕ್ ಮಾಡಲಾಗಿದೆ ಎಂದು ಗರಿಬಾಟ್ರೋ ಹೇಳಿದ್ದಾಳೆ. ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.

ನನ್ನ ಈ ಫೋಟೋ ನನ್ನ ಅಮ್ಮನಿಗೆ ಇಷ್ಟವಾಗಿರಲಿಲ್ಲ. ಆದರೆ ಪೋಪ್​ ಅವರಿಗೆ ಇಷ್ಟವಾಗಿರುವ ಕಾರಣ, ನನಗೆ ಸ್ವರ್ಗ ಮೂರೇ ಗೇಣು ಎನ್ನಿಸುತ್ತಿದೆ. ನಾನು ಸ್ವರ್ಗಕ್ಕೇ ಹೋಗಿಬಿಟ್ಟಿದ್ದೇನೆ ಎನ್ನಿಸುತ್ತಿದೆ. ಖಂಡಿತವಾಗಿಯೂ ನಾನು ವ್ಯಾಟಿಕನ್​ಗೆ ಹೋಗಿ ಪೋಪ್​ ಅವರನ್ನು ಭೇಟಿಯಾಗಲೇಬೇಕು ಎಂದಿದ್ದಾರೆ. ಅವರನ್ನು ಹುಡುಕಿ ಹೋಗುವೆ ಎಂದೂ ಕಮೆಂಟ್​ ಮಾಡಿದ್ದಾರೆ.

ಈ ಫೋಟೋದಲ್ಲಿ 27 ವರ್ಷದ ನತಾಲಿಯಾ ಶಾಲಾ ಬಾಲಕಿಯ ಯುನಿಫಾರ್ಮ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಪೋಪ್ ಫ್ರಾನ್ಸಿಸ್ ಅಲ್ಲದೆ ಸುಮಾರು 13 ಲಕ್ಷದ 3 ಸಾವಿರ ಮಂದಿ ಲೈಕ್​ ಮಾಡಿದ್ದಾರೆ.

ನಿಜವಾಗಿಯೂ ಪೋಪ್​ ಅವರೇ ಲೈಕ್​ ಮಾಡಿದ್ದಾರೋ ಅಥವಾ ನಕಲಿ ಖಾತೆಯಿಂದ ಲೈಕ್​ ಬಂದಿದೆಯೋ ಗೊತ್ತಿಲ್ಲ. ಅಥವಾ ಬೈ ಮಿಸ್ಟೇಕ್​ ಆಗಿದ್ಯೋ ತಿಳಿದಿಲ್ಲ. ಒಟ್ಟಿನಲ್ಲಿ ಈ ಅರೆನಗ್ನ ಚಿತ್ರದಲ್ಲಿ ಮಾಡೆಲ್​ ಖುಷಿಯಾಗಿದ್ದರೆ, ಪೋಪ್​ ಟ್ರೋಲ್​ ಆಗುತ್ತಿದ್ದಾರೆ.

ಅಂದಹಾಗೆ ನತಾಲಿಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net