ಮುತ್ತು ತಂದ ಆಪತ್ತು: ಕಿಸ್‌ ಕೊಟ್ಟು ಕೆಲ್ಸ ಕಳೆದುಕೊಂಡ ಆರೋಗ್ಯ ಸಚಿವ!

kiss
Published on

ಲಂಡನ್: ಸಹೋದ್ಯೋಗಿಯೊಬ್ಬರಿಗೆ ಕಚೇರಿಯಲ್ಲಿಯೇ ಮುತ್ತು ಕೊಟ್ಟು ಆರೋಗ್ಯ ಸಚಿವರೊಬ್ಬರು ಕೆಲಸ ಕಳೆದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.

ಮ್ಯಾಟ್ ಹಾನ್‌ಕಾಕ್ ಮುತ್ತು ಕೊಟ್ಟ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ ಮುತ್ತು ಕೊಟ್ಟಿದ್ದಕ್ಕೆ ಈ ಶಿಕ್ಷೆಯಲ್ಲ, ಬದಲಿಗೆ ಕರೊನಾ ನಿಯಮ ಉಲ್ಲಂಘನೆ ಮಾಡಿದರು ಎನ್ನುವ ಕಾರಣಕ್ಕೆ! ಆರೋಗ್ಯ ಸಚಿವರಾಗಿದ್ದಕೊಂಡು ಕರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇವರ ರಾಜೀನಾಮೆ ಪಡೆಯಲಾಗಿದೆ.

ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲರಿಗೂ ಬುದ್ಧಿಹೇಳುವ ಆರೋಗ್ಯ ಸಚಿವರು ಹೀಗೆ ಮಾಡಿದ್ದು ತಪ್ಪು ಎನ್ನುವುದು ಇದಕ್ಕೆ ಕಾರಣ. ಈ ಸಚಿವರು ಚುಂಬಿಸಿದ ಫೋಟೋಗಳು ವೈರಲ್ ಆಗಿದ್ದವು. ನಂತರ ಈ ಬಗ್ಗೆ ಅವರಿಗೆ ಸಮಜಾಯಿಷಿ ಕೇಳಿದಾಗ ಕರೊನಾ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ನಂತರ ರಾಜೀನಾಮೆ ನೀಡಿದ್ದಾರೆ. ಇವರ ಜಾಗಕ್ಕೆ ಪಾಕಿಸ್ತಾನದ ಸಂಸತ್ ಸದಸ್ಯ ಸಾಜಿದ್ ಜಾವಿದ್ ಬ್ರಿಟನ್ ನೂತನ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net