VIDEO: ಹಾಡಿಗೆ ಮನಸೋತು ಗಾಯಕಿ ಮುಚ್ಚಿಹೋಗುವಷ್ಟು ಹಣ ಸುರಿದ ಅಭಿಮಾನಿ! ವಿಡಿಯೋ ವೈರಲ್‌

singer
Published on

ನವದೆಹಲಿ: ಅಭಿಮಾನಿಗಳ ಕುರಿತು ಹೇಳುವುದೇ ಬೇಡ ಬಿಡಿ. ಕೆಲವರ ಅಭಿಮಾನ ಅತಿರೇಕಕ್ಕೆ ಹೋದರೆ, ಇನ್ನು ಕೆಲವರ ಅಭಿಮಾನ ಕಂಡು ಹುಬ್ಬುಹಾರಿಸಬೇಕಾದ ಸ್ಥಿತಿ. ಅಂಥದ್ದೇ ಒಂದು ಅಭಿಮಾನದ ಘಟನೆ ಇಲ್ಲಿದೆ.

ಜನಪದ ಗಾಯಕಿ ಊರ್ವಶಿ ರಾಡಿಯಾ ಅವರ ಅಭಿಮಾನಿಯೊಬ್ಬರು ಖುಷಿಯಿಂದ ತಮ್ಮ ನೆಚ್ಚಿನ ಗಾಯಕಿಯ ಮೈಮೇಲೆ ಬಕೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಊರ್ವಶಿ ಅವರು ವೇದಿಕೆಯೊಂದರಲ್ಲಿ ಹಾಡುತ್ತಿದ್ದಂತೆ, ವೇದಿಕೆ ಮೇಲೇರಿದ ಈ ಅಭಿಮಾನಿ ಹಣ ಸುರಿದಿದ್ದಾನೆ! ಇದರ ವಿಡಿಯೋ ವೈರಲ್‌ ಆಗಿದೆ.

ಊರ್ವಶಿಯವರು ಗುಜರಾತಿನ ಗಾಯಕಿಯಾಗಿದ್ದಾರೆ. ಇವರು ಭಜನೆಗಳನ್ನು ಹಾಡುತ್ತಿದ್ದರೆ ಎಂಥವರೂ ತಲೆದೂಗಬೇಕು, ಅಷ್ಟು ಸುಶ್ರಾವ್ಯ ಕಂಠ ಇವರದ್ದು. ಇದೇ ಕಾರಣಕ್ಕೆ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಭಜನೆ ಹಾಡಲು ಶುರು ಮಾಡಿದ್ದಾರೆ. ಆಗ ಅಭಿಮಾನಿಯೊಬ್ಬರು ಹಣವನ್ನು ಸುರವಿದ್ದಾರೆ. ಗಾಯಕಿ ಸಂಪೂರ್ಣ ನೋಟಿನಿಂದ ಮುಚ್ಚಿಹೋಗಿದ್ದಾರೆ. ನಂತರ ಇದು ನಕಲಿಯಲ್ಲ, ಬದಲಿಗೆ ಅಸಲಿ ನೋಟು ಎಂದಿದ್ದಾರೆ. ಅಲ್ಲಿದ್ದವರು ಪರೀಕ್ಷಿಸಿ ಹೌದು ಎಂದಿದ್ದಾರೆ.

ಇದಕ್ಕೆ ಗಾಯಕಿ ಬಹಳ ಧನ್ಯವಾದ ಸಲ್ಲಿಸಿದ್ದಾರೆ. ಒಂದು ಕುತೂಹಲದ ವಿಷಯ ಎಂದರೆ, ಊರ್ವಶಿಯವರಿಗೆ ಈ ರೀತಿ ಹಣವನ್ನು ನೀಡುವ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಆದರೆ ಊರ್ವಶಿಯವರು ಆ ಹಣವನ್ನೆಲ್ಲಾ ತಾವು ಇಟ್ಟುಕೊಳ್ಳದೇ ಬಡವರ ಮದುವೆ ಮತ್ತು ಬಡ ಹೆಣ್ಣು ಮಕ್ಕಳಿಗಾಗಿ ಖರ್ಚು ಮಾಡುತ್ತಾರೆ. ಇದೇ ಕಾರಣಕ್ಕೆ ಅವರನ್ನು ಓರ್ವ ಸಮಾಜಸೇವಕಿಯಾಗಿಯೂ ಜನರು ಬಹಳ ಮೆಚ್ಚುತ್ತಾರೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net