ಕರಣ್ weds​ ಹರ್ಷು- ಷರತ್ತು ಅನ್ವಯ: ದಿನಕ್ಕೆ 3 ಸಲ ಐ ಲವ್​ ಯೂ... ಬೋನ್​ಲೆಸ್​ ಚಿಕನ್​ ಹೀಗಿರಬೇಕು...

condition
Published on

ಮದುವೆಗೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿದ್ದು, ಇದೀಗ ಅಂಥದ್ದೇ ಕುತೂಹಲ ಎನ್ನುವ ವಿಡಿಯೋ ಒಂದು ವೈರಲ್​ ಆಗಿದೆ.

ಇದರಲ್ಲಿ ವಧು ಹರ್ಷು ತಾನು ಮದುವೆಯಾಗಲಿರುವ ಕರಣ್​ ಎನ್ನುವ ಯುವಕನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅದರ ಒಪ್ಪಂದದ ಪತ್ರವನ್ನು ತೋರಿಸಿದ್ದಾಳೆ.

ಇದು ಪ್ರೇಮದ ಒಪ್ಪಂದ. ಕರಣ್ ಮತ್ತು ಹರ್ಷು ಎಂಬ ವಧು ವರರ ನಡುವಿನ ಪ್ರೀತಿಯ ಒಪ್ಪಂದವಿದು. `ಕರಣ್ ಮತ್ತು ಹರ್ಷು ನಡುವಿನ ಲವ್ ಎಗ್ರಿಮೆಂಟ್' ಎಂದೇ ಈ ಒಪ್ಪಂದದ ಪತ್ರ ಶುರುವಾಗುತ್ತದೆ. ಇದರಲ್ಲಿ ವಧು ಹಾಕಿರುವ ಷರತ್ತು ಎಂದರೆ, ವೆಬ್‌ಸೀರಿಸ್‌ ನೋಡಿದಾಗ ಅದರ ಸ್ಪಾಯ್ಲರ್‌ಗಳನ್ನು ಹೇಳಬಾರದು, ದಿನಕ್ಕೆ ಕನಿಷ್ಠ ಮೂರು ಬಾರಿ 'ಐ ಲವ್ ಯು' ಹೇಳಬೇಕು, ನನ್ನನ್ನು ಬಿಟ್ಟು ಬಟರ್ ಬೋನ್‌ಲೆಸ್ ಚಿಕನ್ ಎಂದಿಗೂ ತಿನ್ನಬಾರದು. ಸದಾ ಸತ್ಯವನ್ನೇ ಹೇಳಬೇಕು ಎಂದು.

ಇದರ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಳ್ಳಲಾಗಿದ್ದು, ಭಾರಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net