ಪ್ರೇಮಿಯ ಜತೆ ಮಗಳನ್ನು ನೋಡಿದ: ಆಕೆಯ ರುಂಡ ಕತ್ತರಿಸಿ ಎರಡು ಕಿ.ಮೀ ಹಿಡಿದು ನಡೆದ- ಬೆಚ್ಚಿಬಿದ್ದ ಜನತೆ!

murder
Published on

ಲಖನೌ: ತಂದೆಯೊಬ್ಬ ತನ್ನ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ.

17 ವರ್ಷದ ಮಗಳು ಪ್ರೇಮಿಯ ಜತೆ ಇದ್ದುದನ್ನು ಕಂಡ ಸರ್ವೇಶ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಗಳ ರುಂಡವನ್ನು ಛೇದಿಸಿ ಅದರ ಸಹಿತವಾಗಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ!

ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು ಪ್ರಿಯತಮನ ಜತೆಗೆ ಇರುವುದನ್ನು ಕಂಡು ಸಿಟ್ಟುಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಹರಿತವಾದ ಚಾಕು ತಂದು ಮಗಳ ತಲೆ ಕತ್ತರಿಸಿದ್ದಾನೆ!

ಕತ್ತರಿಸಿದ ಮಗಳ ತಲೆಯೊಂದಿಗೆ ಎರಡು ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಹೀಗೆ ಹೋಗುತ್ತಿರುವುದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳಿಗೆ ಈ ರೀತಿಯ ಸಂಬಂಧ ಇರುವುದನ್ನು ತಿಳಿದು ಸಿಟ್ಟಿನಿಂದ ಇಂಥದ್ದೊಂದು ಘನಘೋರ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net