ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

condom
Published on

ವಾಷಿಂಗ್ಟನ್: ಲಿವ್​ ಇನ್​ ಸಂಬಂಧಕ್ಕೆ ಕಾನೂನುಬದ್ಧ ಅನುಮತಿಯನ್ನೇನೋ ನೀಡಲಾಗಿದೆ. ಹಾಗೆಂದು ಇಲ್ಲೊಬ್ಬ ಪ್ರಿಯಕರ ಸ್ನೇಹಿತೆಗೆ ತಿಳಿಸದೇ ಮಹಾಪಾಪ ಮಾಡಿದ್ದಾನೆ. ಅದೇನೆಂದರೆ ಸುರಕ್ಷಿತ ಸೆಕ್ಸ್​ಗಾಗಿ ಕಾಂಡೋಮ್​ ಧರಿಸುವುದಾಗಿ ಆಕೆಗೆ ಹೇಳಿದ್ದ ಈ ಪ್ರಿಯಕರ ಕಾಂಡೋಮ್​ಗೆ ರಂಧ್ರ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಇದು ತಿಳಿಯುತ್ತಲೇ ಪ್ರೇಯಸಿ ಪ್ರಿಯಕರನ ವಿರುದ್ಧ ಅತ್ಯಾಚಾರದ ಕೇಸ್​ ಹಾಕಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಈ ರೀತಿ ಗೆಳತಿಯ ಗಮನಕ್ಕೆ ಬಾರದೇ ಮಾಡಿರುವ ದೈಹಿಕ ಸಂಪರ್ಕ ಅತ್ಯಾಚಾರಕ್ಕೆ ಸಮ ಎಂದು ಅಮೆರಿಕದ ಕೋರ್ಟ್​ ಕೂಡ ಶಿಕ್ಷೆ ವಿಧಿಸಿದೆ.

ಅಂದಹಾಗೆ ಇಂಥದ್ದೊಂದು "ದುಷ್ಕೃತ್ಯ" ಮಾಡಿದವನ ಹೆಸರು ಆಂಡ್ರ್ಯೂ ಲೇವಿಸ್​ ಎಂಬ 47 ವರ್ಷದ ವ್ಯಕ್ತಿ. ಈತನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರೇಯಸಿ, ಅದಕ್ಕೆ ಆತನಿಗೆ ಅನುಮತಿ ನೀಡಿದ್ದಳು. ಆದರೆ ಕಾಂಡೋಮ್​ ಕಡ್ಡಾಯವಾಗಿ ಬಳಸಲೇಬೇಕು ಎಂದಿದ್ದರು.

ಅದಕ್ಕೆ ಒಪ್ಪಿದ್ದ ಆಂಡ್ರ್ಯೂ ರಂಧ್ರ ಮಾಡಿದ್ದ. ಕೆಲ ದಿನ ಹೀಗೆಯೇ ನಡೆದಿತ್ತು. ಕೊನೆಗೊಂದು ದಿನ ಸ್ನೇಹಿತೆಗೆ ಈ ವಿಷಯ ತಿಳಿದಿದೆ. ಆತನ ಜತೆ ಜಗಳಕ್ಕಿಳಿದಿದ್ದಾಳೆ. ಆತ ಏನೇನೋ ಸಮಜಾಯಿಷಿ ಕೊಟ್ಟರೂ, ಕೇಳದ ಆಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ನಂತರ ಕೇಸು ಕೋರ್ಟ್​ ಮೆಟ್ಟಿಲೇರಿದೆ. ಲೇವಿಸ್ ತನ್ನೊಂದಿಗೆ ಹೇಯವಾಗಿ ನಡೆದುಕೊಂಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿತು. ವ್ಯಕ್ತಿ ಮಹಿಳೆಯ ನಂಬಿಕೆಯನ್ನ ಹುಸಿ ಮಾಡಿದ್ದಾನೆ. ಇದೊಂದು ಹೇಯ ಕೃತ್ಯ ಎಂದು ಕೋರ್ಟ್​ ಅಭಿಪ್ರಾಯ ಪಟ್ಟಿದೆ.

ಲೇವಿಸ್​ಗೆ ಪ್ರೇಯಸಿಯನ್ನು ಗರ್ಭಿಣಿ ಮಾಡುವ ಉದ್ದೇಶವಿರಲಿಲ್ಲ. ಗರ್ಭ ಧರಿಸೋ ವಿಷಯದಲ್ಲಿ ಮಹಿಳೆ ಸಂಪೂರ್ಣ ಸ್ವತಂತ್ರಳು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಕೆಗೆ ಹಕ್ಕಿದೆ. ಸೆಕ್ಸ್ ವೇಳೆ ಸ್ವಾಭಾವಿಕವಾಗಿಯೇ ಕಾಂಡೋಮ್ ಹರಿದಿರಬಹುದು ಎಂದು ಆಂಡ್ರ್ಯೂ ಪರ ವಕೀಲರು ವಾದಿಸಿದರು.

ಇದೊಂದು ಚಿಕ್ಕ ಪ್ರಕರಣವಾದ್ರೂ ಮಹಿಳೆಯ ಹಕ್ಕಿನ ವಿಚಾರವಾಗಿದೆ ಎಂದು ಮಹಿಳೆ ಪರ ವಕೀಲರು ವಾದಿಸಿದರು. ಕೋರ್ಟ್​ ಕೂಡ ಇದು ಇದು ಅತ್ಯಾಚಾರಕ್ಕೆ ಸಮ ಎಂದು ಹೇಳಿ ಆಂಡ್ರ್ಯೂಗೆ ನಾಲ್ಕು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net