

ಸರಿ ಅಂತ ನಾನು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದೆ. ಆದರೆ ಅವರ ಮನೆಯವರು ಪದೇ ಪದೇ ಬಂದು ಅವಳನ್ನು ಊರಿಗೆ ಕರೆದು ಕೊಂಡು ಹೋಗುತ್ತಿದ್ದರು. ನಾವು ಹೋಗಿ ನ್ಯಾಯ ಮಾಡಿ ಕರೆದುಕೊಂಡು ಬರುತ್ತಿದ್ದೆವು. ಆದರೆ ಮತ್ತೆ ಕರೆದು ಕೊಂಡುಹೋಗಿ ಆರು ತಿಂಗಳಾಗಿದೆ. ಫೋನ್ ಮಾಡಿದರೆ ನೀನು ಬಂದರೆ ನಿನ್ನನ್ನು ಸಾಯಿಸುತ್ತೀನಿ ಅಂತಿದ್ದಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ನನಗೆ ಮಗು ಬೇಕು ಏನು ಮಾಡಬೇಕು?
ಉತ್ತರ: ನನ್ನ ಪತ್ನಿ ಯಾವುದೇ ಸಕಾರಣವಿಲ್ಲದೇ ನನ್ನನ್ನು ತೊರೆದು ಹೋಗಿದ್ದಾಳೆ. ಅವಳು ಬಂದು ನನ್ನ ಜೊತೆ ದಾಂಪತ್ಯ ಜೀವನ ನಡೆಸಬೇಕುʼ ಎಂದು ನೀವು ಪ್ರಕರಣ ದಾಖಲಿಸಬಹುದು.
ನಿಮ್ಮ ಮಗುವಿನ ಕಸ್ಟಡಿ ನಿಮಗೇ ಕೊಡಬೇಕೆಂದೂ ಕೇಳಿಕೊಂಡು ಅದಕ್ಕೇ ಬೇರೆ ಪ್ರಕರಣವನ್ನೂ ದಾಖಲಿಸಬಹುದು. ನಿಮ್ಮ ಪತ್ನಿಯಿಂದ ಅಥವಾ ಅವಳ ಕಡೆಯವರಿಂದ ನಿಮಗೆ ಪ್ರಾಣ ಬೆದರಿಕೆ ಇದ್ದರೆ ನೀವು ಪೋಲೀಸರಲ್ಲಿ ಕಂಪ್ಲೇಂಟ್ ಕೊಡಬಹುದು.
ಆದರೆ, ಕೇಸು ಹಾಕುವ ಮೊದಲು, ನಿಮ್ಮ ಪತ್ನಿ ಇರುವ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು, ʼವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ʼ ಬಗೆಹರಿಸಿಕೊಡಿ ಎಂದು ಕೇಳಿಕೊಳ್ಳಿ. ಅವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆ ನಡೆಸುತ್ತಾರೆ. ನಿಮ್ಮ ಸಮಸ್ಯೆ ಪರಿಹಾರ ಆಗದಿದ್ದರೆ, ಆಗ ಕೇಸು ದಾಖಲಿಸಿ.