ಫೇಸ್‌ಬುಕ್‌ ಲವರ್‌ಗಾಗಿ ಮದುವೆ ಹಿಂದಿನ ದಿನ ಹರಿದ್ವಾರದಿಂದ ಚೆನ್ನೈಗೆ ಓಡಿಬಂದ ಮದುಮಗಳು: ಮುಂದೇನಾಯ್ತು?

bride1
Published on

ಚೆನ್ನೈ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದ ಉತ್ತರಾಖಾಂಡದ ಹರಿದ್ವಾರದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ಮನೆಯಿಂದ ಎಸ್ಕೇಪ್‌ ಆಗಿ ತಮಿಳುನಾಡಿನವರೆಗೆ ಬಂದಿರುವ ಘಟನೆ ನಡೆದಿದೆ.

ಹರಿದ್ವಾರದ ಯುವತಿಗೆ ಫೇಸ್‌ಬುಕ್‌ನಲ್ಲಿ ಚೆನ್ನೈನ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವತಿಗೆ ಬೇರೆ ಯುವಕನ ಜತೆ ಮದುವೆಯನ್ನು ಪಾಲಕರು ಗೊತ್ತುಮಾಡಿದ್ದಾರೆ. ಮುಹೂರ್ತ ಕೂಡ ನಿಗದಿಯಾಗಿತ್ತು.

ಇದರಿಂದ ಆತಂಕಗೊಂಡ ಯುವತಿ, ಮದುವೆಯ ಹಿಂದಿನ ದಿನವೇ ಮನೆಯಿಂದ ಓಡಿ ಟ್ರೇನ್‌ ಹತ್ತಿ ಬಂದುಬಿಟ್ಟಿದ್ದಾಳೆ. ಮದುಮಗಳಿಗಾಗಿ ಮನೆಯವರು ಹುಡುಕಾಟ ನಡೆಸಿ ಗಾಬರಿಯಾಗಿದ್ದಾರೆ. ಎಲ್ಲಿಯೂ ಆಕೆ ಸಿಗದಾದಾಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ನಂತರ ಪೊಲೀಸ್‌ ವಿಚಾರಣೆ ವೇಳೆ ಆಕೆ ಸದಾ ಮೊಬೈಲ್‌ನಲ್ಲಿ ತಲ್ಲೀನ ಆಗಿರುವುದು, ಆಗ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿದ್ದ ವೇಳೆ ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆಕೆಯ ಫೇಸ್​​ಬುಕ್​ ಅಕೌಂಟ್​ ಚೆಕ್‌ ಮಾಡಲಾಗಿದೆ. ಇದರಲ್ಲಿ ತಮಿಳುನಾಡಿನ ಯುವಕನ ಜತೆ ಪ್ರೀತಿಯ ಮಾತುಕತೆ ನಡೆಸಿರುವುದು ತಿಳಿದಿದೆ.

ಇದರ ಆಧಾರದ ಮೇಲೆ ಪೊಲೀಸರು ಸಾಕಷ್ಟು ತನಿಖೆ ನಡೆಸಿ, ತಮಿಳುನಾಡಿನಲ್ಲಿರುವ ಆ ಯುವಕನ ಮನೆಯನ್ನು ಪತ್ತೆ ಮಾಡಿ, ಅಲ್ಲಿಗೆ ತೆರಳಿ ಯುವತಿಯನ್ನು ವಾಪಸ್‌ ಕರೆದುಕೊಂಡು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net