

ಉತ್ತರ: ನಿಮ್ಮ ತಾಯಿಯ ತಂದೆಯ ಆಸ್ತಿ ಐದು ಭಾಗ ಆಗುತ್ತದೆ. ನಿಮ್ಮ ಅಜ್ಜಿಗೆ ಮತ್ತು ಅವರ ನಾಲ್ಕು ಮಕ್ಕಳಿಗೆ . ಮೃತ ಮಕ್ಕಳ ಭಾಗ ಅವರವರ ವಾರಸುದಾರರಿಗೆ ಹೋಗುತ್ತದೆ. ನಿಮ್ಮ ತಾಯಿಗೆ ಅರ್ಧ ಭಾಗ ಬರುವುದಿಲ್ಲ ಆದರೆ, ಐದನೇ ಒಂದು ಭಾಗ ಬರುತ್ತದೆ.
ವಿಭಾಗದ ಕೇಸು ಹಾಕಿ. ಹಣ ಇಲ್ಲದೇ ಇದ್ದರೆ ಉಚಿತ ಕಾನೂನು ಸೇವೆಯ ಸಹಾಯ ಪಡೆಯಿರಿ. ಒಂದು ಪೈಸೆಯೂ ಖರ್ಚು ಮಾಡದೇ ನಿಮ್ಮ ತಾಯಿ ನ್ಯಾಯ ಪಡೆಯಬಹುದು. ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಕಾನೂನು ಸೇವಾ ಕೇಂದ್ರಕ್ಕೆ ಹೋದರೆ ಅವರೇ ಎಲ್ಲ ಮಾಹಿತಿ ಕೊಡುತ್ತಾರೆ.