

ನವದೆಹಲಿ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದಾಗಲೇ 95 ಕೋಟಿ ರೂಪಾಯಿಗಳು 11.17 ಕೋಟಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಹಣವನ್ನು ಮಂಜೂರು ಮಾಡಿದ್ದು, ಈ ಬಾರಿಯೂ ಅದು ಮುಂದುವರೆಯುತ್ತಿದೆ.
ಇದಾಗಲೇ ಆರು ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದ್ದು, ಏಳನೇ ಕಂತು ಡಿಸೆಂಬರ್ 1ರಂದು ಅರ್ಹ ಫಲಾನುಭವಿಗಳಿಗೆ ಸಿಗಲಿದೆ. ವಾರ್ಷಿಕವಾಗಿ ಆರು ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದ್ದು, ಡಿ.1ರಂದು 2 ಸಾವಿರ ರೂಪಾಯಿ ಸಿಗಲಿದೆ.
ಈ ಯೋಜನೆಯಡಿ ಹೆಸರು ನೋಂದಾಯಿಸಿದ ರೈತರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಆನ್ಲೈನ್ ಮೂಲಕ ಹೇಗೆ ನೋಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ... ನೆನಪಿರಲಿ.. ಅಧಿಕೃತ ವೆಬ್ಸೈಟ್ಗೆ ಮಾತ್ರ ಭೇಟಿ ಕೊಡಿ.
ನಿಮ್ಮ ಹೆಸರು ಇಲ್ಲವೆ? ಹಾಗಿದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರನ್ನು ದಾಖಲಿಸಬಹುದು.
ಲ್ಯಾಂಡ್ ಲೈನ್ ಸಂಖ್ಯೆ - 011-24300606, 23381092, 23382401
ಟೋಲ್ ಫ್ರೀ ಸಂಖ್ಯೆ - 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 155261
ಸಹಾಯವಾಣಿ ಸಂಖ್ಯೆ - 0120-6025109
ಇಮೇಲ್ ID - pmkisan-ict@gov.in