ಅಮೆರಿಕದಲ್ಲಿ ಕೇರಳ ಯುವತಿಯ ಭಯಾನಕ ಹತ್ಯೆ: ಸೀಲಿಂಗ್‌ ತೂರಿಬಂದು ಎದೆಹೊಕ್ಕ ಗುಂಡು!

murder
Published on

ನ್ಯೂಯಾರ್ಕ್‌: ಅಮೆರಿಕದಲ್ಲಿ ನೆಲೆಸಿರುವ ಕೇರಳದ ಯುವತಿಯನ್ನು ಭಯಾನಕವಾಗಿ ಕೊಲೆ ಮಾಡಲಾಗಿದ್ದು, ಇದರ ಹಿಂದಿನ ಕಾರಣ ಮಾತ್ರ ನಿಗೂಢವಾಗಿದೆ.

ಅಲಬಾಮಾ ರಾಜಧಾನಿ ಮ್ಯಾಂಟಗೋಮೇರಿಯಲ್ಲಿ ವಾಸವಾಗಿದ್ದ 19 ವರ್ಷದ ಮರಿಯಮ್​ ಸೂಸನ್​ ಮ್ಯಾಥ್ಯೂ ಎಂಬುವವರನ್ನು ಕೊಲೆ ಮಾಡಲಾಗಿದೆ. ಕೇರಳದ ತಿರುವಲ್ಲಾದ ಮರಿಯನ್‌ ಅವರು ರಾತ್ರಿ ಮಲಗಿದ್ದ ವೇಳೆ ಗುಂಡು ಹಾರಿಸಲಾಗಿದೆ. ಈ ಗುಂಡು ಅವರ ಮನೆಯ ಸೀಲಿಂಗ್‌ ಅನ್ನು ಒಡೆದು ಮರಿಯನ್‌ ಅವರ ಎದೆಯನ್ನು ಹೊಕ್ಕಿದ್ದು, ಅಲ್ಲಿಯೇ ಅವರು ಮೃತಪಟ್ಟಿದ್ದಾರೆ.

ಈ ಕೊಲೆಗೆ ಕಾರಣ ಇನ್ನೂ ತಿಳಿದಿಲ್ಲ. ಈ ರೀತಿ ಕೊಲೆ ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ಶುರುವಾಗಿದೆ. ಸದ್ಯ ಸುಸಾನ್ ಮೃತದೇಹವನ್ನು ಕೇರಳದ ಆಕೆಯ ಹುಟ್ಟೂರಿಗೆ ತಿರಲು ಸಿದ್ಧತೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮ್ಯಾಂಟಗೋಮೇರಿಯಲ್ಲಿ ಕಳೆದೊಂದು ವಾರದಲ್ಲಿ ನಡೆದಿರುವ ಎರಡನೆಯ ಹತ್ಯೆ ಪ್ರಕರಣ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net