ಪುರುಷರು ಸ್ತ್ರೀಯರ ಬಳಿ, ಸ್ತ್ರೀಯರು ಪುರುಷರ ಬಳಿ ಮಸಾಜ್‌ ಮಾಡಿಸಿಕೊಳ್ಳುವಂತಿಲ್ಲ- ಹೊಸ ರೂಲ್ಸ್‌ ತಂದ ಕೇಜ್ರಿ

massage
Published on

ನವದೆಹಲಿ: ಇನ್ನುಮುಂದೆ ಸ್ಪಾ, ಮಸಾಜ್‌ ಸೆಂಟರ್‌ಗಳಲ್ಲಿ ಪುರುಷರು ಮಹಿಳೆಯರ ಬಳಿ, ಮಹಿಳೆಯರು ಪುರುಷರ ಬಳಿ ಮಸಾಜ್‌ ಮಾಡಿಸಿಕೊಳ್ಳುವಂತಿಲ್ಲ.

ಇಂಥದ್ದೊಂದು ಆದೇಶ ಹೊರಟಿರುವುದು ದೆಹಲಿಯಲ್ಲಿ. ಸ್ಪಾ ಸೆಂಟರ್​ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂಥದ್ದೊಂದು ಮಾರ್ಗಸೂಚಿ ಜಾರಿಗೆ ತರಲಾಗಿದೆ. ಕೆಲವು ತಿಂಗಳುಗಳಿಂದ ಸ್ಪಾ ಸೆಂಟರ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜಾಲ್​​​ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಇದರ ಅನ್ವಯ ಸ್ಪಾ ಕೇಂದ್ರಗಳಲ್ಲಿ ಪುರುಷನಿಂದ ಪುರುಷರಿಗೆ ಹಾಗೂ ಮಹಿಳೆಯಿಂದ ಮಹಿಳೆಗೆ ಮಾತ್ರ ಮಸಾಜ್​ ಮಾಡಲು ಅವಕಾಶ ನೀಡಲಾಗಿದೆ.

ಪೂರ್ವ ದೆಹಲಿಯಲ್ಲಿ ಪ್ರಸ್ತುತ 70ಕ್ಕೂ ಹೆಚ್ಚಿನ ಸ್ಪಾ ಕೇಂದ್ರಗಳಿದ್ದು, ಅದರಲ್ಲಿ 41 ಕೇಂದ್ರಗಳು ಮಾತ್ರ ಪರವಾನಿಗೆಯೊಂದಿಗೆ ನಡೆಯುತ್ತಿವೆ. ಇದರ ಜತೆಗೆ, ಸ್ಪಾ ಕೇಂದ್ರದಲ್ಲಿರುವ ಗ್ರಾಹಕರು ಮತ್ತು ಸಿಬ್ಬಂದಿ ಕರೊನಾ ನಿಮಯ ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಮಸಾಜ್‌ ಸಂದರ್ಭಗಳಲ್ಲಿ ಪಿಪಿಇ ಕಿಟ್​ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net