ಹೌಸಿಂಗ್-ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಸ್.ಕೆ. ಮರಿಯಪ್ಪ ಆಯ್ಕೆ

eletion
ಎಸ್.ಕೆ. ಮರಿಯಪ್ಪ, ಸಿ. ಹೊನ್ನಪ್ಪ ಮತ್ತು ಕೆ.ರಂಗನಾಥ್ ಅವರನ್ನು ಶಿವಮೊಗ್ಗ ಹೌಸಿಂಗ್-ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರು ಅಭಿನಂದಿಸಿದರು.
Published on

ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್-ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಸ್.ಕೆ. ಮರಿಯಪ್ಪ, ಉಪಾಧ್ಯಕ್ಷರಾಗಿ ಸಿ. ಹೊನ್ನಪ್ಪ ಮತ್ತು ಖಜಾಂಚಿಯಾಗಿ ಕೆ.ರಂಗನಾಥ್ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎಸ್.ಕೆ.ಮರಿಯಪ್ಪ ತಂಡಕ್ಕೆ ಜಯ ಲಭಿಸಿದ್ದು, ಉಮಾಶಂಕರ ಉಪಾಧ್ಯಾ ತಂಡ ಪರಾಭವಗೊಂಡಿದೆ.

15 ಜನ ನಿರ್ದೇಶಕರಲ್ಲಿ ಎಸ್.ಕೆ.ಮರಿಯಪ್ಪ ತಂಡದಲ್ಲಿ 8 ಮತ್ತು ಉಮಾಶಂಕರ ಉಪಾಧ್ಯಾ ತಂಡದಲ್ಲಿ 7 ನಿರ್ದೇಶಕರು ಗುರುತಿಸಿಕೊಂಡಿದ್ದರು. ಅವಿರೋಧ ಆಯ್ಕೆಯ ಪ್ರಯತ್ನ ಕೊನೆಗೂ ವಿಫಲವಾದ ಹಿನ್ನೆಲೆಯಲ್ಲಿ ಮತದಾನ ನಡೆಸಲಾಯಿತು.

ಎಸ್.ಕೆ ಮರಿಯಪ್ಪ ಅವರ ತಂಡದಲ್ಲಿ ನಿರ್ದೇಶಕರಾಗಿದ್ದ ಶ್ರೀನಿವಾಸ್ ಕರಿಯಣ್ಣ, ಉಮಾಶಂಕರ ಉಪಾಧ್ಯಾ ಪಾಳೆಯಕ್ಕೆ ಜಿಗಿದಿದ್ದರಿಂದ ಬಿರುಸಿನ ಪೈಪೋಟಿ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್. ಕೆ. ಮರಿಯಪ್ಪ ಅವರು 9 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಉಮಾಶಂಕರ್ ಉಪಾಧ್ಯಾಯ 6 ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೊನ್ನಪ್ಪ ಮತ್ತು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ರಂಗನಾಥ್ ಅವರು ತಲಾ 8 ಮತಗಳನ್ನು ಪಡೆದರು. ಎದುರಾಳಿ ತಂಡದ ವೇದಾವತಿ, ನಟರಾಜ ಶಾಸ್ತ್ರಿ ತಲಾ 7 ಮತಗಳನ್ನು ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net