ಜಿಯೋ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್​: ದೇಶಾದ್ಯಂತ ಉಚಿತ ಕರೆ ಸೇವೆ

jio
Published on

ಮುಂಬೈ: ಇದಾಗಲೇ ಮೊಬೈಲ್​ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂಥ ಹೊಸ ಹೊಸ ಅಧ್ಯಾಯವನ್ನೇ ಸೃಷ್ಟಿಸಿ ಬಹುಬೇಗ ಉನ್ನತ ಸ್ಥಾನಕ್ಕೇರಿರುವ ರಿಯಲಯನ್ಸ್​ ಜಿಯೋ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಉಚಿತ ಉಡುಗೊರೆ ನೀಡಲಿದೆ.

ಇದಾಗಲೇ ಡಾಟಾ ಪ್ಯಾಕ್​, ಕರೆಗಳ ದರ ಎಲ್ಲದರಲ್ಲಿಯೂ ಅತ್ಯಂತ ಕಡಿಮೆ ದರವಿಟ್ಟು, ತನ್ನ ಗ್ರಾಹಕರಿಗೆ ಭಾರಿ ಅನುಕೂಲ ಕಲ್ಪಿಸುತ್ತಿರುವ ಜಿಯೋ, ನಾಳೆಯಿಂದ ಹೊಸ ವರ್ಷದ ಗಿಫ್ಟ್​ ನೀಡಲಿದೆ.

ಇದಾಗಲೇ ಜಿಯೋ ನೆಟ್​ವರ್ಕ್​ನಿಂದ ಜಿಯೋ ನೆಟ್​ವರ್ಕ್​ ಹೊಂದಿರುವ ಗ್ರಾಹಕರಿಗೆ ಉಚಿತ ಸೇವೆಯನ್ನು ಒದಗಿಸಲಾಗುತ್ತಿದ್ದು, ಇತರ ನೆಟ್​ವರ್ಕ್​ಗಳಿಗೆ ಕರೆ ಮಾಡಿದರೆರ ನಿಮಿಷಕ್ಕೆ ಆರು ಪೈಕಿ ತಗುಲುತ್ತಿತ್ತು. ಇದೀಗ ಆ ಸೇವೆಯನ್ನೂ ಅಂತಿಮಗೊಳಿಸಿರುವ ಜಿಯೋ, ಇದೀಗ ಎಲ್ಲಾ ನೆಟ್​ವರ್ಕ್​ಗಳಿಗೂ ಉಚಿತ ಕರೆ ಸೇವೆಯನ್ನು ಒದಗಿಸಿದೆ.

ಇದರ ಅರ್ಥ ಜಿಯೋ ಸಿಮ್​ ಉಳ್ಳವರು ಮೂಲಕ ಯಾವುದೇ ಕಂಪೆನಿಯ ಸಿಮ್​ ಉಳ್ಳ ಗ್ರಾಹಕರಿಗೆ ಉಚಿತವಾಗಿ ಕರೆ ಮಾಡಬಹುದು. ನಿಮಿಷಕ್ಕೆ ಆರು ಪೈಸೆ ತಗುತ್ತಿರುವ ಯೋಜನೆಗೆ ಇಂದೇ ಕೊನೆ. 2021ರ ಹೊಸ ವರ್ಷದಿಂದ ಎಲ್ಲ ಕರೆಗಳ ಸೇವೆಗಳೂ ಉಚಿತ ಎಂದು ಜಿಯೋ ಘೋಷಿಸಿದೆ.

ರಿಯಲಯನ್ಸ್​ ಜಿಯೋ ಈ ವಾಗ್ದಾನವನ್ನು ಈ ಹಿಂದೆಯೇ ಮಾಡಿತ್ತು. ಅಂತರಸಂಪರ್ಕ ಬಳಕೆ ಶುಲ್ಕ (ಐಸಿಯು) ವ್ಯವಸ್ಥೆ ನಿಂತ ನಂತರ ಎಲ್ಲಾ ಕರೆಗಳೂ ಉಚಿತ ಎಂದು ಈ ಹಿಂದೆ ಕಂಪೆನಿ ಹೇಳಿತ್ತು. ಆ ಸೇವೆಯು ಡಿಸೆಂಬರ್​ 31ರ 2020ಕ್ಕೆ ಮುಗಿದಿರುವ ಹಿನ್ನೆಲೆಯಲ್ಲಿ ಇನ್ನುಮುಂದೆ ಎಲ್ಲ ಕರೆಗಳೂ ಉಚಿತ.

ಜಿಯೋದಿಂದ ದೇಶದ ಎಲ್ಲಿಗೆ ಬೇಕಾದರೂ ಯಾವುದೇ ನೆಟ್​ವರ್ಕ್​ಗೆ ಬೇಕಾದರೂ ಉಚಿತವಾಗಿ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net