

ನವದೆಹಲಿ: ಕೆಲ ದಿನಗಳಿಂದ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಇಲ್ಲಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಇರುವವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ನಟಿ, ಜಯಲಲಿತಾ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಪರೂಪದ ಚಿತ್ರ ಎಂದು ಕ್ಯಾಪ್ಷನ್ ನೀಡಲಾಗಿದೆ.
ಇದು ವಾಟ್ಸ್‌ಆ್ಯಪ್‌ಗೆ ಬಂದದ್ದೇ ತಡ, ತಮ್ಮ ಸ್ನೇಹಿತ ವರ್ಗದಲ್ಲಿ ಈ ಫೋಟೋ ಶೇರ್ ಮಾಡುತ್ತಿರುವವರೇ ಹೆಚ್ಚು. ಈ ಫೋಟೋ ನೋಡಲು ಸುಂದರವಾಗಿರುವುದು ಮಾತ್ರವಲ್ಲದೇ ಎರಡು ದಿಗ್ಗಜರು ಒಂದೇ ಕಡೆ ಇರುವ ಅಪರೂಪದ ಫೋಟೋ ಎಂದುಕೊಂಡವರೇ ಹೆಚ್ಚು.
ಆದರೆ ಈ ಫೋಟೋದ ಅಸಲಿಯತ್ತೇನು ಗೊತ್ತಾ? ಇಲ್ಲಿ ಇರುವವರು ಜಯಲಲಿತಾ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನಟಿಯಾಗಿದ್ದ ಬ್ಲ್ಯಾಕ್ ಆ್ಯಂಡ್ ಫೋಟೋದಲ್ಲಿ ಅವರನ್ನು ನೋಡಿದವರು ಇಲ್ಲವೇ ಅವರು ನಟಿಸಿದ್ದ ಸಿನಿಮಾ ನೋಡಿದವರಿಗೂ ಇದು ಗೊತ್ತು, ಈ ಸುಂದರ ಮೊಗದ ಹೆಣ್ಣುಮಗಳ ಜಯಲಲಿತಾ ಎಂದು. ಆದರೆ ಅವರ ಪಕ್ಕದಲ್ಲಿ ಇರುವವರು ಯಾರು?
ಖಂಡಿತವಾಗಿಯೂ ಅವರು ನಿರ್ಮಲಾ ಸೀತಾರಾಮನ್ ಅಲ್ಲ. ನಿರ್ಮಲಾ ಅವರ ಹೋಲಿಕೆ ಇವರಿಗೆ ಇರುವುದು ನಿಜವಾದರೂ ಇವರು ಅವರಲ್ಲ, ಅಸಲಿಗೆ ಜಯಲಲಿತಾ ಪಕ್ಕದಲ್ಲಿ ಇರುವವರು ತಮಿಳುನಾಡಿದ ಪ್ರಸಿದ್ಧ ಲೇಖಕಿ ಶಿವಶಂಕರಿ. ಗೂಗಲ್ ರೀವರ್ಸ್ ಇಮೇಜ್ ಮೂಲಕ ಈ ಸತ್ಯಾಂಶವನ್ನು ಕಂಡುಹಿಡಿಯಲಾಗಿದೆ.
ಶಿವಶಂಕರಿಯವರ ಇಂದಿನ ಫೋಟೋ ಇಲ್ಲಿದೆ ನೋಡಿ...