

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ತಮ್ಮ ಮದುವೆಯ ಕುರಿತಂತೆ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಅದೀಗ ಭಾರಿ ಸುದ್ದಿಯಾಗುತ್ತಿದೆ.
ತಿರುಪತಿಯಲ್ಲಿ ಮದುವೆ ಆಗಲಿದ್ದೇನೆ, ಇದಕ್ಕೂ ಮೊದಲು ಇಟಲಿಯ ಐಸ್‍ಲ್ಯಾಂಡ್‍ನಲ್ಲಿ ನಾನು ಬ್ಯಾಚುಲರ್ ಪಾರ್ಟಿ ಮಾಡುತ್ತೇನೆ ಎಂದು ಜಾನ್ಹವಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಬರೆದುಕೊಂಡಿರುವ ತಮ್ಮ ಮದುವೆಯ ಕನಸಿನ ಬಗ್ಗೆ. ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಹೊಂದಿರುವ ಜಾಹ್ನವಿ , ಅದರ ಗುಟ್ಟನ್ನು ಈಗ ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ.
2-3 ದಿನಗಳ ಕಾಲ ಮದುವೆ ಆಗುವ ಆಸೆ ಇದೆ. ಚೆನ್ನೈನಲ್ಲಿರುವ ಮೈಲಾಪುರದಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಬೇಕು. ನಂತರ ತಿರುಪತಿಯಲ್ಲಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ.
ಅಮ್ಮ ಶ್ರೀದೇವಿಯಂತೆ ಖ್ಯಾತಿ ಗಳಿಸುವ ಹಂಬಲ ಹೊಂದಿರುವ ನಟಿ ಜಾನ್ಹವಿಗೆ ಸದ್ಯ ಈ ಅದೃಷ್ಟ ಇದ್ದಂತಿಲ್ಲ. ಮೊದಲ ಸಿನಿಮಾ ಧಡಕ್ ಬಳಿಕ ಅವರಿಗೆ ಯಾವ ದೊಡ್ಡ ಅವರಕಾಶ ಸಿಗಲಿಲ್ಲ. ಅದಕ್ಕಾಗಿಯೇ ಸದ್ಯ ಮದುವೆಯಾಗುವ ಯೋಚನೆಯಲ್ಲಿರುವ ಜಾನ್ಹವಿ ಈಗ ವಿದೇಶದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.