ಹಾಸ್ಟೆಲ್​ಗೆ ನುಗ್ಗಿದ ಪೊಲೀಸರು ಬಾಲಕಿಯರ ಬೆತ್ತಲೆಗೊಳಿಸಿ, ನೃತ್ಯ ಮಾಡಿಸಿದರು- ಮಹಾರಾಷ್ಟ್ರದಲ್ಲಿ ಭಯಾನಕ ಘಟನೆ!

police
Published on

ಮುಂಬೈ: ಹಾಸ್ಟೆಲ್​ಗೆ ನುಗ್ಗಿದ ಪೊಲೀಸರು ಬಾಲಕಿಯರ ಬಟ್ಟೆ ಬಿಚ್ಚಿಸಿ ಬಲವಂತದಿಂದ ನೃತ್ಯ ಮಾಡಿರುವ ಬೆಚ್ಚಿಬೀಳುವ ಘಟನೆ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ನಡೆದಿದೆ.

ಇಲ್ಲಿನ ಬಾಲಕಿಯರ ವಸತಿಗೃಹಕ್ಕೆ ತೆರಳಿದ್ದ ಪೊಲೀಸರು ಇಂಥದ್ದೊಂದು ಕೃತ್ಯ ಎಸಗಿದ್ದು, ಅದರ ವಿಡಿಯೋ ಮಾಡಿದ್ದಾರೆ.

ಜಲಗಾಂವ್​ನ ವಸತಿಗೃಹದಲ್ಲಿರುವ ಕೆಲವು ಹುಡುಗಿಯರ ತನಿಖೆಯ ನೆಪದಲ್ಲಿ ಹೊರಗಿನ ಜನರು ಮತ್ತು ಪೊಲೀಸರಿಗೆ ಹಾಸ್ಟೆಲ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಹಾಸ್ಟೆಲ್​ಗೆ ಬಂದ ಪೊಲೀಸರು ಬಲವಂತವಾಗಿ ಕೆಲವು ಹುಡುಗಿಯರ ಬಟ್ಟೆ ಬಿಚ್ಚಿಸಿದ್ದಾರೆ ಮತ್ತು ನೃತ್ಯ ಮಾಡಲು ಒತ್ತಾಯಿಸಲಾಗಿದೆ ಎನ್ನಲಾಗಿದ್ದು, ಇದರ ವೀಡಿಯೊ ಕ್ಲಿಪ್ ಸಹ ಬಹಿರಂಗವಾಗಿದೆ.

ಇದು ಮಹಾರಾಷ್ಟ್ರ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಬೆದರಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.

ಈ ಘಟನೆ ಇಂದು ವಿಧಾನಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆ ನಂತರ ಕೂಡಲೇ ಸಮಿತಿ ರಚನೆಯ ಕುರಿತು ಸಚಿವ ದೇಶಮುಖ್​ ಪ್ರಸ್ತಾಪ ಮಾಡಿದರು.

ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net