ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶ್ರೀಗಂಧ ಮರ ಕಳವು

sandal wood tree
Published on

ಬೆಂಗಳೂರು: ವಿಧಾನಸೌಧ ಕೂಗಳತೆ ದೂರದಲ್ಲಿ ಶ್ರೀಗಂಧ ಮರವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ಶೇಷಾದ್ರಿ ರಸ್ತೆ ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಶ್ರೀಗಂಧ ಮರ ಕಳವಾಗಿದೆ. ಈ ಕುರಿತು ಕಾಲೇಜಿನ ಪ್ರಾಂಶುಪಾಲ ಸದಾಶಿವಮೂರ್ತಿ, ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಕಾಲೇಜು ಆವರಣದಲ್ಲಿ (ಹೈಟೆಕ್ ಸೆಂಟರ್) ಹಿಂಭಾಗದಲ್ಲಿ ಬೆಳದಿದ್ದ ಶ್ರೀಗಂಧ ಮರವನ್ನು ಕಡಿದು ದುಷ್ಕರ್ಮಿಗಳು ತುಂಡುಗಳನ್ನು ಕಳವು ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net