ಅಗಲಿದ ನಟನ ಶೋಕಾಚರಣೆ ವೇಳೆ ಸಭೆಯ ನಡುವೆ ಅಧ್ಯಕ್ಷನ ನೆಕ್ಕಿದ ನಾಯಿಗಳು- ವಿಡಿಯೋ ವೈರಲ್‌

dog
Published on

ಐರ್ಲೆಂಡ್‌: ಕರೊನಾ ವೈರಸ್‌ ಕುರಿತಂತೆ ಐರ್ಲೆಂಡ್​​ನ ಅಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಈಚೆಗೆ ಮೃತಪಟ್ಟ ಹಾಲಿವುಡ್‌ನ ಪ್ರಖ್ಯಾತ ನಟ ಟಾಮ್‌ ಹಿಕ್ಕಿ ಅವರ ಕುರಿತು ಸಂತಾಪ ಸೂಚಿಸುತ್ತಿದ್ದರು.

ಇದೇ ಸಂದರ್ಭದಲ್ಲಿ ಅವರ ಸಾಕುನಾಯಿಗಳು ಓಡೋಡಿ ಬಂದು ತನ್ನ ಒಡೆಯನ ಪ್ರೀತಿಯಿಂದ ನೆಕ್ಕತೊಡಗಿದವು. ಸಂತಾಪ ಸೂಚಕದ ನಡುವೆ ನಾಯಿ ನೆಕ್ಕುತ್ತಿರುವುದನ್ನು ಅರಿದ ಅಧ್ಯಕ್ಷ ಮೈಕಲ್‌ ಡಿ. ಹಿಗ್ಗಿನ್ಸ್‌ ಅವರಿಗೆ ಮುಜುಗರವಾಯಿತು. ಆದರೆ ಮುದ್ದಾಡುವ ನಾಯಿಗಳಿಂದ ಅವರು ತಪ್ಪಿಸಿಕೊಳ್ಳಲು ಆಗಲಿಲ್ಲ.

ಇದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ಮುದ್ದು ನಾಯಿಗಳ ತುಂಟಾಟ ನೆಟ್ಟಿಗರ ಮನಸೆಳೆದಿದೆ. ಏಳು ತಿಂಗಳ ಈ ನಾಯಿಗಳು ಎಷ್ಟೇ ಕಾಟ ಕೊಟ್ಟರೂ ಅಧ್ಯಕ್ಷ ಮೈಕೆಲ್‌ ಅವರು ಪತ್ರಿಕಾಗೋಷ್ಠಿಯನ್ನು ಮುಂದುವರೆಸಿರುವುದು, ಮಧ್ಯೆ ಮಧ್ಯೆ ನಾಯಿಗಳ ತಲೆ ಸವರುತ್ತಿರುವ ದೃಶ್ಯ ಒಂದು ರೀತಿಯಲ್ಲಿ ಖುಷಿಕೊಡುವಂತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋವನ್ನು ಖುದ್ದು ಮೈಕೆಲ್‌ ಅವರಿಗೆ ತಮ್ಮ ಅಧಿಕೃತ ಟಿಕ್​ಟಾಕ್​ ಪೇಜ್​ನಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net