VIDEO: ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಭಾರತದ ಅತಿ ಉದ್ದ ಸರಕು ರೈಲಿನ ಓಡಾಟ- ಇದಕ್ಕಿದೆ ಹಲವು ವಿಶೇಷತೆ...

train
Published on

ರಾಯ್ಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಅತಿ ಉದ್ದವಾದ ಸರಕು ರೈಲನ್ನು ಭಾರತೀಯ ರೈಲ್ವೆ ಪರಿಚಯಿಸಿದೆ. ವಿದ್ಯುತ್ ಕೇಂದ್ರಗಳಲ್ಲಿ ಇಂಧನ ಕೊರತೆಗಳನ್ನು ನೀಗಿಸಲು ಹಾಗೂ ಅತಿ ಹೆಚ್ಚು ಬೇಡಿಕೆಯ ಸಮಯಗಳಲ್ಲಿ ಕಲ್ಲಿದ್ದಲು ಸಾಗಿಸಲು ಬಳಸುವ ಸಲುವಾಗಿ ಇದನ್ನು ಪರಿಚಯಿಸಲಾಗಿದೆ.

ಸೂಪರ್ ವಾಸುಕಿ ಎಂಬ ಹೆಸರಿನ ಈ ರೈಲು ಇದುವರೆಗೆ ಭಾರತೀಯ ರೈಲ್ವೇಯಿಂದ ನಡೆಸಲ್ಪಟ್ಟ ಅತಿ ಉದ್ದವಾದ ಹಾಗೂ ಭಾರವಾದ ಸರಕು ಸಾಗಣೆ ರೈಲಾಗಿದೆ. ಇದು ರೈಲ್ವೇ ನಿಲ್ದಾಣವನ್ನು ದಾಟಲು ಸುಮಾರು 4 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಭಾರತೀಯ ರೇಲ್ವೆಯ ಆಗ್ನೇಯ ಕೇಂದ್ರೀಯ ವಿಭಾಗದಿಂದ ಈ ನೂತನ ರೈಲು ಚಾಲನೆಗೊಂಡಿದೆ. 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ರೈಲು ಛತ್ತೀಸ್‌ಗಢದ ಕೊರ್ಬಾದಿಂದ ನಾಗಪುರದ ರಾಜನಂದಗಾವ್‌ಗೆ ಓಡಾಟ ನಡೆಸಿದೆ.

ಒಟ್ಟೂ 25,962 ತೂಕ ಲೋಡ್ ಆಗಿರುವ 295 ವ್ಯಾಗನ್​ಗಳನ್ನು ಎಳೆದೊಯ್ಯುವ ಶಕ್ತಿ ಇದಕ್ಕಿದೆ. ಈ ರೈಲು ಒಟ್ಟು 6 ಲೊಕೊಮೊಟಿವ್​ಗಳನ್ನು ಹೊಂದಿದೆ. 295 ಬಂಡಿಗಳುಳ್ಳ ರೈಲು ಸುಮಾರು 27 ಸಾವಿರ ಟನ್ ಕಲ್ಲಿದ್ದಲನ್ನು ಹೊತ್ತು ಕೋರ್ಬಾದಿಂದ ನಾಗಪುರದ ರಾಜನಂದಗಾವ್ ತಲುಪಿದೆ. ರೈಲು ಸ್ಥಳ ತಲುಪಲು 11:20 ಗಂಟೆಗಳನ್ನು ತೆಗೆದುಕೊಂಡಿದೆ. ಈ ಗೂಡ್ಸ್ ರೈಲಿಗೆ 6 ಎಂಜಿನ್ ಬಳಸಲಾಗಿತ್ತು. ಸೂಪರ್ ವಾಸುಕಿ ರೈಲು ಒಂದು ಬಾರಿ ಹೊತ್ತೊಯ್ಯಬಲ್ಲ ಕಲ್ಲಿದ್ದಲಿನಿಂದ 3 ಸಾವಿರ ಮೆಗಾವ್ಯಾಟ್‌ನ ವಿದ್ಯುತ್ ಸ್ಥಾವರವನ್ನು ಒಂದು ಇಡೀ ದಿನ ಉರಿಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡುವ ಮೂಲಕ ಇದರ ಸಂಚಾರದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Koo App
Indian Railways’ longest & heaviest freight train ever - Super Vasuki (3.5km, loaded train, with 6 Locos & 295 wagons & of 25,962 tonnes gross weight) was operated on August 15 as part of the government’s Azadi ka Amrit Mahotsav celebration. @ashwinivaishnaw @RailMinIndia
View attached media content
-Prasar Bharati News Services & Digital Platform (@pbns_india)16 Aug 2022

ನೀವೂ ನೋಡಿ ಈ ರೈಲಿನ ಸಂಚಾರ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net