

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರಂಭದಲ್ಲಿ ಈ ನೇಮಕಾತಿಯು 6 ತಿಂಗಳ ಅವಧಿಗೆ ಅಥವಾ ನೇಮಕಾತಿ ಅದವರ ಸೇವೆಯು ತೃಪ್ತಿಕರವಾದಲ್ಲಿ ಅವಧಿಯನ್ನು ಮುಂದುವರಿಸಲಾಗುವುದು. ಈ ನೇಮಕಾತಿಗಳು ತಾತ್ಕಾಲಿಕವಾಗಿ ನಿಗಧಿತ ಅವಧಿಗೆ ಅಥವಾ ಸರ್ಕಾರದಿಂದ ನಿಯೋಜನೆ ಮೇರೆಗೆ ಭರ್ತಿಯಾಗುವವರೆಗೆ ಅಥವಾ ಸರ್ಕಾರದಿಂದ ಕ್ರಮಬದ್ಧ ನೇಮಕಾತಿ ನಡೆಯುವವರೆಗೆ ಅಥವಾ ಆಯೋಗದ ಮುಂದಿನ ಆದೇಶದವರೆಗೆ ಒಳಪಟ್ಟಿರುತ್ತದೆ. ಆಸಕ್ತ ಅಭ್ಯರ್ಥಿಗಳು ಇಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 10
ಹುದ್ದೆ ಸಂಖ್ಯೆ ವೇತನ ಮಾಸಿಕ ರೂ.ಗಳಲ್ಲಿ
* ಅಪರ ನಿಬಂಧಕ 1 51,550
* ಸಹಾಯಕ ನಿಬಂಧಕ 1 52,650
* ಕೋರ್ಟ್ ಅಧಿಕಾರಿ 1 43,100
* ತೀರ್ಪು ಬರಹಗಾರ 1 37,900
* ಕಾನೂನು ಸಹಾಯಕರು/ ಸಂಶೋಧನಾ ಸಹಾಯಕ 2 33,450
* ಶೀಘ್ರಲಿಪಿಗಾರ 2 27,650
* ಸಹಾಯಕ 1 30,350
* ವಾಹನ ಚಾಲಕ 1 21,400
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ/ ತತ್ಸಮಾನ ಶಿಕ್ಷಣ, ಕಂಪ್ಯೂಟರ್ ಸೈನ್ಸ್ ಪದವಿ, ಯಾವುದೇ ಪದವಿ, ಕಾನೂನು ಪದವಿ, ಎಲ್ಎಲ್ಎಂ ಅಧ್ಯಯನ ಮಾಡಿರಬೇಕು. ಕನ್ನಡ, ಇಂಗ್ಲಿಷ್ ಭಾಷಾ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಅವಶ್ಯ. ಶೀಘ್ರಲಿಪಿಗಾರ ಹುದ್ದೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸೀನಿಯರ್ ಗ್ರೇಡ್ನಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ.ವಾಹನ ಚಾಲಕ ಹುದ್ದೆಗೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಗರಷ್ಠ 62 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೇ ದಿನ: 4.9.2021
ಅರ್ಜಿ ಸಲ್ಲಿಕೆ ವಿಳಾಸ: ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, 5ನೇ ಹಂತ, ಬಹುಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು - 560001
ಅರ್ಜಿ ಸಲ್ಲಿಕೆ ಮೇಲ್ ಐಡಿ: secretary-kshrc@karnataka.gov.in
ಅಧಿಸೂಚನೆಗೆ: https://bit.ly/3ywyMpX
ಮಾಹಿತಿಗೆ: http://kshrc.karnataka.gov.in