ಬಸ್ಸಿನಲ್ಲಿ ನಿದ್ದೆಗೆ ಜಾರಿ ಕೈಕಳೆದುಕೊಂಡ ವ್ಯಾಪಾರಿ: ಹಾವೇರಿಯಲ್ಲಿ ಭಯಾನಕ ಘಟನೆ

nadeem
Published on

ಹಾವೇರಿ: ಬಸ್ಸಿನಲ್ಲಿ ಹೋಗುವ ಸಮಯದಲ್ಲಿ ಬಸ್ಸಿನಿಂದ ಕೈ ಮತ್ತು ತಲೆಯನ್ನು ಹೊರಕ್ಕೆ ಹಾಕಬಾರದು ಎಂದು ಹೇಳುತ್ತಲೇ ಇರುತ್ತಾರೆ. ಈ ಬಗ್ಗೆ ಬಸ್ಸಿನಲ್ಲಿಯೂ ಎಚ್ಚರಿಕೆಯ ಫಲಕ ಅಳವಡಿಸಲಾಗುತ್ತದೆ. ಆದರೆ ಇದರ ಹೊರತಾಗಿಯೂ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.

ಅಂಥದ್ದೇ ಒಂದು ಭಯಾನಕ ಘಟನೆ ಹಾವೇರಿಯ ಹಿರೆಕೇರೂರಿನಲ್ಲಿ ನಡೆದಿದೆ. ಬಸ್ಸಿನ ಕಿಟಕಿಯ ಹೊರಗೆ ಕೈ ಚಾಚಿದ ವ್ಯಾಪಾರಿಯೊಬ್ಬನ ಕೈ ಕಟ್ ಆಗಿರುವ ಘಟನೆ ಇದಾಗಿದೆ. ನದೀಮ್ ಸಾಬ ತಾವರಗಿ ಎಂಬ ತರಕಾರಿ ವ್ಯಾಪಾರಿಯ ಕೈ ಕಟ್ ಆಗಿದೆ.

ಇವರು ಹಾವೇರಿ ಜಿಲ್ಲೆಯ ಹಿರೆಕೇರೂರು ಪಟ್ಟಣದ ನಿವಾಸಿ. ಅಂಕೋಲ್‌ದಿಂದ ಹಿರೆಕೇರೂರಿಗೆ ಬರುವಾಗ ನಡೆದಿರುವ ದುರ್ಘಟನೆ ಇದಾಗಿದೆ. ಇವರು ಬಸ್‌ನಲ್ಲಿ ನಿದ್ದೆಗೆ ಜಾರಿದ್ದರು. ಈ ಸಂದರ್ಭದಲ್ಲಿ ಅವರ ಕೈ ಹೊರಗೆ ಚಾಚಲಾಗಿತ್ತು. ಈ ಸಂದರ್ಭದಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ ವಾಹನದ ಕ್ಯಾಬಿನ್ ಕಬ್ಬಿಣ ಬಡಿದಿದ್ದಕ್ಕೆ ಹ್ಯಾಂಡ್ ಕಟ್ ಆಗಿದೆ. ನೋವಿನಿಂದ ಇವರು ಚೀರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೈಕಟ್‌ ಆಗಿರುವುದನ್ನು ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ನದೀಮ್‌ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್‌-ಹಾವೇರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net