

ನವದೆಹಲಿ: ಇದು ಕರೊನಾ ಸಂಕಷ್ಟ ಕಾಲ. ಎಷ್ಟೋ ಮಂದಿ ಕರೊನಾಕ್ಕೆ ಹೆದರಿ ಮನೆಯಿಂದ ಹೊರಕ್ಕೆ ಕಾಲಿಡಲು ಭಯಪಡುತ್ತಿರುವ ದಿನಗಳಿವು.
ಇಂಥ ದಿನದಲ್ಲಿ ಮನೆಯಲ್ಲಿ ಕೂತು ಬೋರಾದ ಅಜ್ಜಿಯೊಬ್ಬರು ಬೌಲಿಂಗ್ ಆಟವಾಡಿ ಇದೀಗ ಭಾರಿ ವೈರಲ್ ಆಗಿದ್ದಾರೆ. ಒಂದೇ ಬೌಲಿಂಗ್‌ಗೆ ಎಲ್ಲ ಬಾಲ್‌ಗಳನ್ನೂ ಕ್ಲೀನ್ ಮಾಡಿರುವ ಈ ಅಜ್ಜಿಯ ಆಟದ ಚಾಣಾಕ್ಷತೆ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯ ಮೂಲಕ ರಂಜಿಸುತ್ತಿರುವ ಈ ಅಜ್ಜಿ ಸದ್ಯ ಸಾಮಾಜಿಕ ಜಾಲತಾಣದ ಸ್ಟಾರ್. ಈ ಅಜ್ಜಿಯ ವಿಡಿಯೋ ಅನ್ನು ಸುದರ್ಶನ್ ಕೃಷ್ಣಮೂರ್ತಿ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು ಇದೀಗ ಭಾರಿ ಮೆಚ್ಚುಗೆ ಗಳಿಸಿದೆ.
ಚೆಂಡನ್ನು ಟ್ರ‍್ಯಾಕ್‌ನಲ್ಲಿ ತಳ್ಳಿದ ಕೂಡಲೇ ತಮ್ಮ ಮೂಗನ್ನು ಕವರ್ ಮಾಡಿರುವ ಮಾಸ್ಕ್ ಸರಿಯಾಗಿ ಕುಳಿತಿದೆ ಎಂದು ಖಾತ್ರಿ ಮಾಡಿಕೊಳ್ಳುತ್ತಿರುವ ಈ ಅಜ್ಜಿಯ ವಿಡಿಯೋ ನಮ್ಮೆಲ್ಲರಿಗೂ ಕೋವಿಡ್‌ನಿಂದ ರಕ್ಷಿಸಿಕೊಳ್ಳುವ ಕುರಿತಂತೆ ಇನ್ನಷ್ಟು ಅರಿವು ಮೂಡಿಸುತ್ತಿದೆ ಎಂದು ಕೃಷ್ಣಮೂರ್ತಿಯವರು ಶೀರ್ಷಿಕೆ ಕೊಟ್ಟಿದ್ದಾರೆ.