ಹೀಗೆ ಬಂದು ಮತ ಚಲಾಯಿಸಿ, ಪೋಸ್​ ನೀಡಿ: ನಿಮಗೆ ಸಿಗಲಿದೆ ದುಬಾರಿ ಬೆಲೆಯ ಉಡುಗೊರೆ!

underwear
Published on

ಕೆನ್​ಬೆರ್ರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿವೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗಲಿದ್ದಾರೆ. ಇವೆಲ್ಲಾ ಸರಿ... ಆದರೆ ಇಂಟೆರೆಸ್ಟಿಂಗ್​ ವಿಷಯವೊಂದು ಚುನಾವಣೆಯಲ್ಲಿ ನಡೆದಿದೆ. ಅದೇನೆಂದರೆ ಚುನಾವಣೆಯಲ್ಲಿ ಅನೇಕ ಮಂದಿ ಒಳ ಉಡುಪಿನಲ್ಲಿ ಬಂದು ಮತವನ್ನು ಚಲಾಯಿಸಿ ಹೋದದ್ದು!

ಹಾಗೆಂದು ಇದೇನು ಸರ್ಕಾರದ ವಿರುದ್ಧ ಪ್ರತಿಭಟನೆ ಅಂದುಕೊಂಡರೆ ತಪ್ಪು. ಹಾಗಿದ್ದರೆ ಇವರೆಲ್ಲಾ ಇಷ್ಟು ಖುಷಿಯಲ್ಲಿ ಅಂಡರ್​ವೇರ್​ನಲ್ಲಿ ಬಂದು ಮತ ಚಲಾಯಿಸಿದ್ದು ಏಕೆಂದರೆ, ಉಚಿತ ಒಳ ಉಡುಪು ಪಡೆಯಲು! ಅರ್ಥಾತ್​, ಒಳ ಉಡುಪುಗಳನ್ನು ಮಾತ್ರ ಧರಿಸಿ ಮತ ಚಲಾಯಿಸುವ ಯಾರಿಗಾದರೂ ಒಳ ಉಡುಪು ಕಂಪನಿಯು ಉಚಿತ ಒಳ ಉಡುಪುಗಳನ್ನು ನೀಡಿತ್ತು.

 ಕಂಪನಿಯ ಪ್ರಕಾರ, ಒಂದು ಜೊತೆ ಒಳಉಡುಪುಗಳನ್ನು ಉಚಿತವಾಗಿ ಪಡೆಯಲು, ಮತದಾರರು ತಮ್ಮ ಕಂಪನಿಯ ಒಳ ಉಡುಪುಗಳಲ್ಲಿ ಬಂದು ಮತ ಚಲಾಯಿಸಬೇಕು ಮತ್ತು #SmugglersDecide ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳಬೇಕು. ಹಾಗೆ ಮಾಡಿದವರಿಗೆ ಕಂಪನಿಯಿಂದ ಒಳಉಡುಪುಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು

ಅಂಡರ್ ಗಾರ್ಮೆಂಟ್ ಕಂಪನಿಯಾಗಿರುವ ಬಝೀ ಸ್ಮಗ್ಲರ್ ಈ ಘೋಷಣೆ ಮಾಡಿತ್ತು. ಇದನ್ನು ಕೇಳಿ ಉಚಿತವಾಗಿ ಅಂಡರ್​ವೇರ್​ ಪಡೆಯಲು ಈ ವೇಷದಲ್ಲಿ ಸಹಸ್ರಾರು ಪುರುಷರು, ಮಕ್ಕಳು ಬಂದು ಮತ ಚಲಾಯಿಸಿ ಹೋಗಿದ್ದು, ಇದೀಗ ಭಾರಿ ವೈರಲ್​ ಆಗಿದೆ. ಒಂದು ಜೊತೆ ಒಳಉಡುಪುಗಳನ್ನು ಉಚಿತವಾಗಿ ಪಡೆಯಲು, ಮತದಾರರು ತಮ್ಮ ಕಂಪನಿಯ ಒಳ ಉಡುಪುಗಳಲ್ಲಿ ಬಂದು ಮತ ಚಲಾಯಿಸಬೇಕು ಮತ್ತು #SmugglersDecide ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳಬೇಕು ಎಂದು ಬಝೀ ಸ್ಮಗ್ಲರ್ ಹೇಳಿತ್ತು. ಹೀಗೆ ಷರತ್ತಿನಂತೆ ಮತ ಚಲಾಯಿಸಿ ಫೋಟೋ ಶೇರ್​ ಮಾಡಿಕೊಂಡವರಿಗೆ ಕಂಪೆನಿ ಉಚಿತವಾಗಿ ಅಂಡರ್​ವೇರ್​ ಕಳಿಸುತ್ತಿದೆ. ಅಂದಹಾಗೆ ಈ ಬ್ರ್ಯಾಂಡ್​ನ ಅಂಡರ್​ವೇರ್​ಗೆ ಬಹು ದುಬಾರಿ ಬೆಲೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net