VIDEO: ಡ್ರಗ್ಸ್​ ಸೇವಿಸಿ ಕುಣಿದು ಕುಪ್ಪಳಿಸಿದ ಪ್ರಧಾನಿ? ವೈರಲ್​ ವಿಡಿಯೋದಿಂದ ಪೇಚಿಗೆ ಸಿಲುಕಿದ ಲೇಡಿ ಪಿಎಂ!

sanna
Published on

ಕೋಪನ್ ಹೇಗನ್​​ (ಫಿನ್​ಲ್ಯಾಂಡ್): ವಿಶ್ವದ ಅತಿ ಕಿರಿಯ ಪ್ರಧಾನಿ ಎಂದು ಎನಿಸಿಕೊಂಡಿರುವವರು ಫಿನ್​ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್​. ಇವರಿಗೆ ಈಗ 36 ವರ್ಷ ವಯಸ್ಸು. ಕಿರಿಯ ಪ್ರಧಾನಿ ಎಂದು ತುಂಬಾ ಪ್ರಸಿದ್ಧಿ ಪಡೆದಿರುವ ಇವರೀಗ ವೈರಲ್​ ವಿಡಿಯೋ ಒಂದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಾರ್ಟಿಯೊಂದರಲ್ಲಿ ಇವರು ತಮ್ಮ ಸ್ನೇಹಿತರ ಜತೆ ಹುಚ್ಚಾಪಟ್ಟೆಯಾಗಿ ಕುಣಿದಿದ್ದು, ಡ್ರಗ್ಸ್​ ಸೇವನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪಾರ್ಟಿಯಲ್ಲಿ ಇವರು ಮದ್ಯಪಾನವನ್ನೂ ಮಾಡಿದ್ದರು ಎನ್ನಲಾಗುತ್ತಿದೆ. ಬಿಳಿಯ ಪ್ಯಾಂಟ್​ ಕಪ್ಪು ಷರ್ಟ್​ ಹಾಕಿಕೊಂಡು ಪಾರ್ಟಿಗೆ ಬಂದಿದ್ದ ಪ್ರಧಾನಿ, ಹಾಡಿಗೆ ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸಿದ್ದಾರೆ. ಈ ಪಾರ್ಟಿಯಲ್ಲಿ ಮದ್ಯದ ಸರಬರಾಜು ಮಾತ್ರವಲ್ಲದೇ ಡ್ರಗ್ಸ್​ ಕೂಡ ಸೇವನೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಮರಿನ್ ಅವರ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮಿತ್ರ ಮತ್ತು ಸೆಂಟರ್ ಪಾರ್ಟಿ ಎಂಪಿ ಮಿಕ್ಕೊ ಕರ್ನ್ ಅವರು ಪ್ರಧಾನಿ ಸ್ವಯಂಪ್ರೇರಣೆಯಿಂದ ಡ್ರಗ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮರಿನ್, ನಾನು ನನ್ನ ಬಿಡುವಿನ ವೇಳೆಯನ್ನು ಸ್ನೇಹಿತರೊಂದಿಗೆ ಕಳೆಯುತ್ತೇನೆ. ನಾನು ಡ್ರಗ್ಸ್ ಸೇವನೆ ಮಾಡಿಲ್ಲ. ಇದನ್ನು ಸಾಬೀತು ಪಡಿಸಿಕೊಳ್ಳಲು ನಾನು ಯಾವುದೇ ಪರೀಕ್ಷೆಗೆ ಒಳಗಾಗುವುದಕ್ಕೆ ತಯಾರು ಇದ್ದೇನೆ. ನನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ಪಾರ್ಟಿಯಲ್ಲಿ ನಾನು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರುವಾಗ ಡ್ಯಾನ್ಸ್​, ಸಾಂಗ್​ ಸೇರಿದಂತೆ ಮಜಾ ಮಾಡುವುದು ಮಾಮೂಲು, ಈ ವೈರಲ್​ ವಿಡಿಯೋದಲ್ಲಿ ನಾನು ಮದ್ಯ ಸೇವನೆ ಮಾಡಿದ್ದೇನೆ. ಆದರೆ ಡ್ರಗ್ಸ್ ತೆಗೆದುಕೊಂಡಿಲ್ಲ. ನಾವು ಮಾಡುವುದೆಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿರುತ್ತದೆ ಎಂದಿದ್ದಾರೆ.

ವರದಿಗಳ ಪ್ರಕಾರ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (SDP) ಸಂಸದ ಇಲ್ಮರಿ ನೂರ್ಮಿನೆನ್ ಮತ್ತು ಫಿನ್ನಿಷ್ ಗಾಯಕಿ ಅಲ್ಮಾ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ, ಈ ವಿಡಿಯೋ ಯಾವಾಗ ಎಂಬುದು ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net