ಪತ್ನಿಯೊಂದಿಗೆ ಇರುವ ಮಗು ನೋಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಹೊರತಾಗಿ ಬೇರೆ ಉಪಾಯವಿದೆಯೆ?

nyayadevate
Published on
ನನ್ನ ಮಗಳನ್ನು ನನ್ನ ಹೆಂಡತಿಯೇ ಇಟ್ಟುಕೊಂಡಿದ್ದಾಳೆ. ನಮ್ಮ ಮನೆಗೂ ಬರುತ್ತಿಲ್ಲ. ನನ್ನನ್ನೂ ಅವಳ ತವರು ಮನೆಗೆ ಹೋದರೆ ಒಳಗೆ ಸೇರಿಸುತ್ತಿಲ್ಲ. ಮಗಳಿಗೆ ಈಗ ಎರಡು ವರ್ಷ. ನಾನು ಮಗಳನ್ನು ನೋಡಲು ಏನಾದರೂ ಉಪಾಯವಿದೆಯೇ ತಿಳಿಸಿ. ಕೋರ್ಟ್‌ಗೆ ಅರ್ಜಿ ಸಲ್ಲಿಸದೆಯೇ ಏನಾದರೂ ಮಾಡಬಹುದಾ?

ಉತ್ತರ: ಸಾಮಾನ್ಯವಾಗಿ ಐದು ವರ್ಷಗಳ ಒಳಗಿನ ವಯಸ್ಸಿನ ಮಗುವಿನ ಕಸ್ಟಡಿಯನ್ನು ತಾಯಿಗೇ ಕೊಡುತ್ತಾರೆ .ನೀವು ನ್ಯಾಯಾಲಯದಲ್ಲಿ ಜಿ. ಅಂಡ್‌. ಡಬ್ಲ್ಯೂಸಿ ಪ್ರಕರಣ ದಾಖಲಿಸಿ, ಅದರಲ್ಲಿ ಮಧ್ಯಂತರ ಅರ್ಜಿ ಹಾಕಿ. ತಿಂಗಳಲ್ಲಿ ಇಷ್ಟು ಬಾರಿ ನನಗೆ ಯಾವುದಾದರೂ ಸ್ಥಳದಲ್ಲಿ ಮಗುವನ್ನು ನೋಡಲು , ಅದರೊಡನೆ ಕಾಲ ಕಳೆಯಲು ಅವಕಾಶ ಮಾಡಿಕೊಡಿ ಎಂದು ಅರ್ಜಿ ಹಾಕಿ. ನ್ಯಾಯಾಲಯ ನಿಮ್ಮ ಅರ್ಜಿಯನ್ನು ಸಾಮಾನ್ಯವಾಗಿ ಪುರಸ್ಕರಿಸುತ್ತದೆ.

ಕೋರ್ಟಿಗೆ ಹೋಗುವುದು ಬೇಡ ಎನ್ನಿಸಿದರೆ, ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ʼಮಧ್ಯಸ್ಥಿಕಾ ಕೇಂದ್ರಕ್ಕೆʼ ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು , ʼವ್ಯಾಜ್ಯ ಪೂರ್ವ ಮಧ್ಯಸ್ಥಿಕೆʼ ಮೂಲಕ ಪರಿಹರಿಸಿಕೊಡಿ ಎಂದು ಅರ್ಜಿ ಸಲ್ಲಿಸಿ. ಅಲ್ಲಿ ಇಬ್ಬರನ್ನೂ ಕರೆಯಿಸಿ ಮಾತಾಡಿ, ನಿಮ್ಮ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ. ಆಗಲೂ ಪರಿಹಾರ ಸಿಗದಿದ್ದರೆ , ಆ ನಂತರ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net