ಕರೊನಾದಿಂದ ಗುಣಮುಖರಾಗಿದ್ದ ಮಾಜಿ ಸಿಎಂ ಶಿವಾಜಿರಾವ್‌ ಪಟೇಲ್‌ ನಿಧನ

shivarji
Published on

ಪುಣೆ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ ಅವರು ಇಂದು ಬೆಳಗ್ಗೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಶಿವಾಜಿರಾವ್‌ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇವರಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ಪಾಸಿಟಿವ್‌ ವರದಿ ಬಂದಿತ್ತು. ನಂತರ ಚಿಕಿತ್ಸೆ ಪಡೆದುಕೊಂಡಿದ್ದ ಶಿವಾಜಿರಾವ್‌ ಅವರು ಗುಣಮುಖರಾಗಿದ್ದರು. ವರದಿಯಲ್ಲಿ ನೆಗೆಟಿವ್‌ ಎಂದು ತೋರಿಸಿದಾಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.

ಇದಾದ ಕೆಲವೇ ದಿನಗಳಲ್ಲಿ ಇವರು ಮೃತಪಟ್ಟಿದ್ದಾರೆ. ಮರಾಠವಾಡ ಪ್ರದೇಶದ ಲಾತೂರ್‌ನ ಹಿರಿಯ ಕಾಂಗ್ರೆಸ್ ನಾಯಕರಾದ ನೀಲಂಗೇಕರ್ ಅವರು ಜೂನ್ 1985 ರಿಂದ ಮಾರ್ಚ್ 1986 ರವರೆಗೆ ರಾಜ್ಯ ಮುಖ್ಯಮಂತ್ರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net