

ಮುಂಬೈ: ಮೂವರು ಮಹಿಳೆಯರು ಫುಲ್ ಟೈಟ್ ಆಗಿ ಮಧ್ಯರಾತ್ರಿ ರಸ್ತೆಯ ಮಧ್ಯೆ ಭಾರಿ ಗಲಾಟೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಕಳೆದ ತಿಂಗಳು ಮುಂಬೈನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಮೂವರು ಮಹಿಳೆಯರು ಕುಡಿದು ಓಲಾ ಕ್ಯಾಬ್ನ ಚಾಲಕ, ಅಲ್ಲಿಗೆ ಬಂದ ಪೊಲೀಸ್ ಎಲ್ಲರನ್ನೂ ಸುಸ್ತು ಮಾಡಿರುವ ಘಟನೆ ಇದಾಗಿದೆ.
ಮುಂಬೈನಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ವಾಪಾಸಾಗುತ್ತಿದ್ದ ವೇಳೆ ಮೂವರು ಯುವತಿಯರು ಈ ಹಂಗಾಮಾ ಸೃಷ್ಟಿಸಿದ್ದಾರೆ. ಓಲಾ ಕ್ಯಾಬ್ ಏರಿದ್ದ ಒಬ್ಬಾಕೆ, ನಂತರ ಕ್ಯಾಬ್ ಚಾಲಕನನ್ನು ನಿಂದಿಸಿ ತಾನೇ ಡ್ರೈವ್ ಮಾಡಲು ಮುಂದಾಗಿದ್ದಾಳೆ. ಗಲಾಟೆ ಆಗುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಇನ್ನೊಬ್ಬ ಯುವತಿ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದುಕೊಂಡು ಬೆದರಿಕೆ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
"ಹಲೋ, ನನ್ನ ಹೆಸರು ಅರ್ಚಿತಾ.." ಎಂದು ಒಬ್ಬಾಕೆ ಕಿರುಚಿಕೊಂಡಿದ್ದಾಳೆ. ನೀವು ಪೊಲೀಸರನ್ನಾದರೂ ಕರೆಯಿರಿ, ಮೀಡಿಯಾದವರನ್ನಾದರೂ ಕರೆಯಿರಿ ಯಾರಿಗೂ ನಾವು ಡೋಂಟ್ ಕೇರ್ ಎಂದಿದ್ದಾಳೆ. ಒಬ್ಬಾಕೆಯ ಪ್ಯಾಂಟ್ ಕೂಡ ಒದ್ದೆಯಾಗಿದ್ದು, ಈಕೆ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ ಎಂದು ಸಾಕಷ್ಟು ಕಮೆಂಟಿಗರು ಕಮೆಂಟ್ ಮಾಡಿದ್ದನ್ನು ಕಾಣಬಹುದು!
ಅದರಲ್ಲಿ ಒಬ್ಬಾಕೆಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಕೆ ಕುಡಿದು ರಸ್ತೆಯ ಮೇಲೆ ಬಿದ್ದುಕೊಂಡಿದ್ದಾಳೆ.
ಕುಂಗಫೂ ಪಾಂಡೆ ಎನ್ನುವವರು ಶೇರ್ ಮಾಡಿರುವ ವಿಡಿಯೋಗಳೆಲ್ಲಾ ಇಲ್ಲಿವೆ ನೋಡಿ: